ಜಿಲ್ಲೆ

ಕುಡಿಯುವ ನೀರಿನ ಯಂತ್ರ ಲೋಕಾರ್ಪಣೆ

ಸೌಮ್ಯ ಆರ್

ಬೆಳ್ತಂಗಡಿ: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು, ಅನಂತೋಡಿ ಅನಂತೇಶ್ವರ ಫ್ರೆಂಡ್ಸ್ ಕೊಡುಗೆಯಾಗಿ ದಿ.ದಿನೇಶ್ ಪೂಜಾರಿ ಉಪ್ಪಾರು ಅವರ ಸ್ಮರಣಾರ್ಥವಾಗಿ ದೇವಸ್ಥಾನದ ವಠಾರದಲ್ಲಿ ನಿರ್ಮಾಣ ಮಾಡಿದ ಅನಂತೋಡಿ ವೃತ್ತವನ್ನು ಮಮತಾ ದಿನೇಶ್ ಪೂಜಾರಿ ಉಪ್ಪಾರು ಲೋಕಾರ್ಪಣೆಗೊಳಿಸಿದರು.

ಆರಿಕೋಡಿ, ಬೆಳಾಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರದವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಆರಿಕೋಡಿ, ಬೆಳಾಲು ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿ ಹರೀಶ್ ಆರಿಕೋಡಿ ಲೋಕಾರ್ಪಣೆಗೊಳಿಸಿದರು.

ಬೆಳ್ತಂಗಡಿ ಇಲಾಖಾ ಗುತ್ತಿಗೆ ಇಂಜಿನಿಯರ್ ಹರೀಶ್ ಕಾರಿಂಜ, ದೇವಸ್ಥಾನದ ಆಸ್ರಣ್ಣ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುನ್ನಾಯ, ಮಹಿಳಾ ಸಮಿತಿ ಗೌರವಾಧ್ಯಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಮಹಿಳಾ ಸಮಿತಿ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್ ಗೌಡ, ಅನಂತೇಶ್ವರ ಫ್ರೆಂಡ್ಸ್ ಅಧ್ಯಕ್ಷ ವಿಶ್ವನಾಥ ಪೂಜಾರಿ ಬಾಯ್ತರಡ್ಡ ಉಪಸ್ಥಿತರಿದ್ದರು. ಗಿರೀಶ್ ಎಂ ಸ್ವಾಗತಿಸಿದರು. ಸತೀಶ್ ಗೌಡ ಎಳ್ಳುಗದ್ದೆ ವಂದಿಸಿದರು.