ಬೆಂಗಳೂರು:ನರ್ಸಿಂಗ್, ಪ್ಯಾರಾ ಮೆಡಿಕಲ್, ಮ್ಯಾನೇಜ್ ಮೆಂಟ್ ಸ್ಟಡೀಸ್ ಹಾಗೂ ಸಮಗ್ರ ಶೈಕ್ಷಣಿಕ ವಲಯದಲ್ಲಿ ಉತ್ತಮ ಸಾಧನೆಗೈದಿರುವ ಧನ್ವಂತರಿ ಸಂಸ್ಥೆ ಮೊದಲ ಬಾರಿಗೆ ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ ತೆರೆಯುತ್ತಿರುವುದಾಗಿ ತಿಳಿಸಿದೆ.
ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಮೂಲಕ ಕ್ರಾಂತಿಕಾರ ಬದಲಾವಣೆಯನ್ನು ತರಲು ಮುನ್ನುಡಿ ಬರೆದಿದ್ದು, ಜೂನ್ 22ರ ಶನಿವಾರ ಕೃಷಿ ಸಚಿವ ಚೆಲುವರಾಯ ಸ್ವಾಮಿ ಚಿಕ್ಕಬಾಣವಾರದಲ್ಲಿರುವ ನೂತನ ಅಕಾಡೆಮಿಯನ್ನು ಉದ್ಘಾಟಿಸಲಿದಾರೆ. ಎಂದು ಧನ್ವಂತರಿ ಗ್ರೂಪ್ ಆ್ ಇನ್ಸ್ಟಿಟ್ಯೂಷನ್ ಶೈಕ್ಷಣಿಕ ನಿರ್ದೇಶಕ ಡಾ. ಗಣೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧನ್ವಂತರಿ ಸಂಸ್ಥೆ ಇದೇ ಮೊದಲ ಬಾರಿಗೆ ಮಾನವ ರಹಿತ ವೈಮಾನಿಕ ವಾಹನಗಳು, ಡ್ರೋನ್ ಗಳ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ. ಸಿ.ಎ.ಎಸ್.ಆರ್ ಹಾಗೂ ಎಂಐಟಿ, ಅಣ್ಣಾ ವಿಶ್ವವಿದ್ಯಾಲಯಗಳು ಹಾರಾಟ ಪ್ಲೈಯಿಂಗ್ ತರಗತಿಗಳನ್ನು ನಡೆಸಲು ಅನುಮತಿ ಪಡೆದುಕೊಂಡಿವೆ ಎಂದು ಹೇಳಿದರು.
ಚಿಕ್ಕಬಾಣಾವರದಲ್ಲಿ ಕ್ಯಾಂಪಸ್ ಸಿಮ್ಯುಲೇಟರ್‌ಗಳನ್ನು ಆಯೋಜಿಸಲಾಗುತ್ತದೆ ಮತ್ತು ತರಗತಿಗಳನ್ನು ನಡೆಸಲಾಗುತ್ತದೆ. ಯುಎವಿ ಸಂಗ್ರಹಣೆ, ಬ್ಯಾಟರಿ ಚಾರ್ಜಿಂಗ್ , ಯುಎವಿ ನಿರ್ವಹಣೆ ಜೊತೆಗೆ ಸಮೀಪದ ಆಲೂರು ವಲಯದಲ್ಲಿ ಪ್ಲೈಯಿಂಗ್ ಫೀಲ್ಡ್ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಿ.ಬಿ, ವಿಂಗ್ ಕಮಾಂಡರ್ ಕೆ.ಆರ್. ಶ್ರೀಕಾಂತ್, ಫ್ಲೈಟ್ ಲೆಪ್ಟಿನೆಂಟ್ ಎ.ಟಿ. ಕಿಶೋರ್, ಕೇಂದ್ರದ ವಿಮಾನಯಾನ ಮಹಾ ನಿರ್ದೇಶನಾಲಯ ಡಿಜಿಸಿಎ ದಿಂದ ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಅಣ್ಣಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ ಎಂದರು.
ತಮಿಳುನಾಡಿನ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪಾಧ್ಯಕ್ಷ ಡಾ. ಮೈಲಸ್ವಾಮಿ ಅಣ್ಣಾ ದೊರೈ, ಅಣ್ಣಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ವೆಲ್ರಾಜ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ..ವಿ. ಎಸ್,ಸುರೇಶ, ಭಾರತೀಯ ವಿಜ್ಞಾನ ಮಂದಿರದ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎನ್.ಎಸ್. ಓಂಕಾರ್, ಕೇಂದ್ರದ ವಿಮಾನಯಾನ ಮಹಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಾನೆ ಮತ್ತಿತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.