ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಉದ್ಘಾಟನೆಯನ್ನು ಗೋಪಾಲ ಹೂಗಾರ ಹಾಗೂ ಎಸ್.ಎಸ್. ಕೋರಿ ನೆರವೇರಿಸಿದರು. ಪ್ರೊ.ಐ.ಎಸ್. ಕಾಳಪ್ಪನವರ, ಬಿ.ಆರ್. ಪಾಟೀಲ, ಡಾ. ಜೆ.ಡಿ. ಅಕಮಂಚಿ ಮತ್ತಿತರರಿದ್ದಾರೆ.  
ಜಿಲ್ಲೆ

ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಸಿ.ಕೆ. ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿಗಳಿಗೆ, ಗುರುಗಳಿಗೆ, ವಯಸ್ಕರಿಗೆ ಗೌರವ ಸಲ್ಲಿಸಬೇಕು. ಇವತ್ತಿನ ಯುವಕರ ಮನಸ್ಸು ಹರಿಯುವ ಹೊಳೆಯಂತೆ ಸದಾ ಹರಿಯುತ್ತಿರುತ್ತದೆ. ಅದಕ್ಕೆ ಗೋಡೆ ಕಟ್ಟಿ ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟು ಅಮೂಲ್ಯ ಮುತ್ತುಗಳಾಗಿ ಬೆಳೆಯಬೇಕೆಂದರು.

ಗೋಪಾಲ ಹೂಗಾರ ಉದ್ಘಾಟಿಸಿ ಹಾಸ್ಯ ಕಾರ್ಯಕ್ರಮ ನೀಡಿದರು. ಗೋಪಾಲ ಇಂಚಗೇರಿ ಹಾಸ್ಯದ ಹೊನಲು ಹರಿಸಿದರು. ಎಸ್.ಎಸ್. ಕೋರಿ ಕ್ರೀಡಾ ಚಟುವಟಿಕೆ ಉದ್ಘಾಟಿಸಿದರು.

ಆಡಳಿತಾಧಿಕಾರಿ ಪ್ರೊ.ಐ.ಎಸ್. ಕಾಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಪಾಟೀಲ, ಪ್ರಾಚಾರ್ಯ ಡಾ. ಜೆ.ಡಿ. ಅಕಮಂಚಿ, ಪಿ.ಎಂ. ಪವಾರ, ವೈ.ಆರ್. ಹಿಟ್ನಳ್ಳಿ, ಬಿ.ವೈ. ಕಾಸನೀಸ, ಸಿದ್ದು ಬಿರಾದಾರ, ಬಿ.ಟಿ. ಅಂಗಡಿ, ಎ.ಆರ್. ಪೊದ್ದಾರ, ಜೆ.ಎ. ಬಿರಾದಾರ, ಎ.ಎನ್. ಹಳ್ಳೂರ, ವಾಣಿ ಮಠ, ಎಂ.ಟಿ. ದೊಡಮನಿ, ಎಸ್.ಟಿ. ತೇಲಕರ, ಎಸ್.ಆರ್. ಭೂಯ್ಯರ, ಎಸ್.ಎಂ. ನಾಯ್ಕೋಡಿ ಮತ್ತಿತರರಿದ್ದರು.

ಹಾಜಿ ಕಬಾಡೆ ಹಾಗೂ ಸಂಜನಾ ನರಸಲಗಿ ನಿರೂಪಿಸಿದರು. ಅಜಯ ರಾಠೋಡ ಹಾಗೂ ಶಮಾ ಜಾಧವ ಸ್ವಾಗತಿಸಿದರು. ಶಶಿಕಾಂತ ನಗರೆ ಹಾಗೂ ಸುಪ್ರಿತಾ ಚವ್ಹಾಣ ವಂದಿಸಿದರು.