ವಿಜಯಪುರ ನಗರದ ಗುರುಕುಲ ರಸ್ತೆಯಲ್ಲಿ ತೆರೆಯಲಾದ ಕಾಂಗ್ರೆಸ್ ಪ್ರಚಾರ ಕಾರ್ಯಾಲಯವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಪ್ರಕಾಶ ರಾಠೋಡ, ರಾಜು ಆಲಗೂರ, ಎಂ.ಎಸ್. ಲೋಣಿ ಮತ್ತಿತರರಿದ್ದಾರೆ.  
ಜಿಲ್ಲೆ

ಕಾಂಗ್ರೆಸ್ ಪ್ರಚಾರ ಕಾರ್ಯಾಲಯದ ಉದ್ಘಾಟನೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಗುರುಕುಲ ರಸ್ತೆಯಲ್ಲಿ ತೆರೆಯಲಾಗಿರುವ ಕಾಂಗ್ರೆಸ್ ಪ್ರಚಾರ ಕಾರ್ಯಾಲಯವನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು.

ವಿಪ ಸದಸ್ಯ ಪ್ರಕಾಶ ರಾಠೋಡ, ಅಭ್ಯರ್ಥಿ ರಾಜು ಆಲಗೂರ, ನಾಗಠಾಣ ಶಾಸಕ ವಿಠಲ ಕಟಕದೊಂಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್. ಲೋಣಿ, ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ. ಮಕ್ಬೂಲ್ ಬಾಗವಾನ, ಅಬ್ದುಲ್ ಹಮೀದ್ ಮುಶ್ರೀಫ್, ವಸಂತ ಹೊನಮೋಡೆ, ಹೊನಮಲ್ಲ ಸಾರವಾಡ, ಸುರೇಶಗೌಡ ಪಾಟೀಲ, ಚಂದ್ರಕಾಂತ ಶೆಟ್ಟಿ ಮತ್ತಿತರರಿದ್ದರು.