ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೃಷಿಕರ ಆದಾಯ ಹೆಚ್ಚಿಸಲು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುವುದು. ಗುಣಮಟ್ಟದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೆ ಆದಾಯ ಹೆಚ್ಚಿಸಿಕೊಳ್ಳಬಹುದು. ಕೃಷಿ ಇಲಾಖೆಯ ಸಹಾಯದಿಂದ 2000 ಮೌಲ್ಯವರ್ಧನೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತದೆ. ಇದನ್ನು ರಾಜ್ಯದ ಬ್ರಾಂಡೆಡ್ ವ್ಯಾಪಾರಿ ಮಳಿಗೆಗಳ ಮೂಲಕ ಜೆನೆರಿಕ್ ಬ್ರ್ಯಾಂಡ್ ಕೇರಳ ಆಗ್ರೋ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕೃಷಿ ಖಾತೆ ಸಚಿವ ಪಿ.ಪ್ರಸಾದ್ ತಿಳಿಸಿದ್ದಾರೆ.
ಕೇರಳ ತೋಟಗಾರಿಕಾ ನಿಗಮ(ಪಿಸಿಕೆ)ಕಾಸರಗೋಡು ಎಸ್ಟೇಟ್‌ನ ಮುಳಿಯಾರಿನಲ್ಲಿ ನೂತನವಾಗಿ ಆರಂಭಗೊಂಡ ಗೇರುಹಣ್ಣಿನ ಕಾರ್ಬೋರೇಟ್ ಪಾನೀಯ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರ್ ಗ್ರಾಪಂ ಅಧ್ಯಕ್ಷ ಪಿ.ವಿ.ಮೀನಿ, ವಾರ್ಡ್ ಸದಸ್ಯ ರೈಸಾ ರಶೀದ್, ಆಡಳಿತ ಮಂಡಳಿ ಸದಸ್ಯರು ಕೆ.ಎಸ್.ಕುರಿಯಾಕೋಸ್, ಪ್ರೊ.ಕೆ.ಮೋಹನಕುಮಾರ್, ಜೋಯಿಸ್ ಸೆಬಾಸ್ಟಿಯನ್ ಸಿ.ಪಿ.ಬಾಬು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪ್ಲಾಂಟೇಶನ್ ಕಾರ್ಪೊರೇಷನ್ ನೌಕರರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ಲಾಂಟೇಶನ್ ಕಾರ್ಪೊರೇಷನ್ ಕೇರಳ ಲಿಮಿಟೆಡ್ ಅಧ್ಯಕ್ಷ ಒ.ಪಿ.ಅಬ್ದುಸಲಾಂ ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ಡಾ.ಜೇಮ್ಸ್ ಜೇಕಬ್ ವಂದಿಸಿದರು.