ಮದ್ದೂರು ತಾಲೂಕು ಮಾಲಗಾರನಹಳ್ಳಿ ಗ್ರಾಮದಲ್ಲಿ ಬಸ್ ತಂಗುದಾಣವನ್ನು ಶಾಸಕ ಉದಯ್ ಉದ್ಘಾಟಿಸಿದರು. ಎನ್.ಆರ್.ಶಿಲ್ಪಾ ಜಯಲಿಂಗಯ್ಯ, ಗೌರಮ್ಮ, ಕಿರಣ್, ಕುಮಾರ್, ಸುರೇಶ್, ರಾಜೇಶ್, ಉಮಾ, ಕಂಠಿ ಸುರೇಶ್ ಇದ್ದರು. 
ಜಿಲ್ಲೆ

ಮಾಲಗಾರನಹಳ್ಳಿಯಲ್ಲಿ ಬಸ್ ತಂಗುದಾಣ ಉದ್ಘಾಟನೆ

ನಾಗೇಶ ಎಸ್

ಮದ್ದೂರು: ತಾಲೂಕಿನ ಮಾಲಗಾರನಹಳ್ಳಿಯ ಗ್ರಾಮಸ್ಥರ ಬೇಡಿಕೆಯಂತೆ ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ನಂತರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಸ್ ತಂಗುದಾಣ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು. ನಂತರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೊಂಡ ಕಾರಣ ತಂಗುದಾಣದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಭಾಗ್ಯ ಕಂಡಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಉದಯ್ ಮನವಿ ಮಾಡಿದರು.

ನಗರಕೆರೆ ಗ್ರಾಪಂ ಅಧ್ಯಕ್ಷೆ ಎನ್.ಆರ್.ಶಿಲ್ಪಾ ಜಯಲಿಂಗಯ್ಯ, ಸದಸ್ಯರಾದ ಗೌರಮ್ಮ, ಕಿರಣ್, ಕುಮಾರ್, ಸುರೇಶ್, ಉಮಾ, ರಾಜೇಶ್, ಪಿಡಿಒ ಜಿ.ಕೆ.ರಂಜಿತಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ, ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರ್, ಜಿಪಂ ಮಾಜಿ ಅಧ್ಯಕ್ಷ ಕಂಠಿ ಸುರೇಶ್, ಮುಖಂಡ ರಾಮಲಿಂಗಯ್ಯ ಇದ್ದರು.