ಭಾಲ್ಕಿಯ ಪಾಟೀಲ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಡಾ.ಸಂತೋಷ ಕಾಳೆ, ಸಾಗರ ನಾಯಿಕ, ಯೋಗೇಶ ಅಷ್ಟೂರೆ, ನಿತಿನ್ ಪಾಟೀಲ್ ಇದ್ದರು. 
ಜಿಲ್ಲೆ

ರಕ್ತದಾನ ಮಾಡಿ ಜೀವ ಉಳಿಸಿ

ಭಾಲ್ಕಿ: ರಕ್ತದಾನ ಮಾಡಿ ಜೀವ ಉಳಿಸಿ ಪುಣ್ಯಕಟ್ಟಿಕೊಳ್ಳಿ ಎಂದು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್​ನ ಅಧ್ಯಕ್ಷ ಡಾ.ವಿಲಾಸ ಕನಸೆ ಹೇಳಿದರು.

ಪಟ್ಟಣದ ಖಂಡ್ರೆ ಗಲ್ಲಿ ಹತ್ತಿರದ ಪಾಟೀಲ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವ ಉಳಿಸಬಹುದು. ಹಣ, ಅನ್ನ, ಸೇರಿ ಹಲವಾರು ದಾನಗಳಲ್ಲಿಯೂ ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ಕಾರಣ ಜೀವನವೇ ಇಲ್ಲದ ಮೇಲೆ ಬೇರೆ ದಾನ ಪಡೆದು ಫಲವೇನು. ಹೀಗಾಗಿ ರಕ್ತದಾನ ಮಾಡಿ, ಜೀವ ಉಳಿಸಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ನ್ಯಾಯವಾದಿ ಉಮಾಕಾಂತ ವಾರದ, ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಪ್ರತಿವರ್ಷ ರಕ್ತದಾನ ಶಿಬಿರ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ರಸಪ್ರಶ್ನೆ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಆಸನ ವ್ಯವಸ್ಥೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಸೇರಿ ಹಲವಾರು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರ ಸೇವೆಯೇ ರೋಟರಿಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಡೈಮಂಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ವಸಂತ ಪವಾರ್, ಡಾ.ಶಶಿಕಾಂತ ಭೂರೆ ಮಾತನಾಡಿದರು.

ರಕ್ತದಾನ ಮಾಡಿದ ದಾನಿಗಳಿಗೆ ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು.

ಡಾ.ನಿತಿನ ಪಾಟೀಲ್, ಡಾ.ಕವಿತಾ ಪಾಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಡಾ.ಸಂತೋಷ ಕಾಳೆ, ಡಾ.ಅಮಿತ ಅಷ್ಟೂರೆ, ಉದ್ಯಮಿ ಯೋಗೇಶ ಅಷ್ಟೂರೆ, ಪ್ರಮುಖರಾದ ಸಂಜೀವ ಪಂಡರಗಿರೆ, ಡಾ.ವಿಕ್ರಮ ದೇವಪ್ಪ, ಡಾ.ಸಜ್ಜಲ್ ಬಳತೆ, ನ್ಯಾಯವಾದಿಗಳಾದ ಸಾಗರ ನಾಯಿಕ, ಸೌರಭ ನಾಯಿಕ, ಪ್ರಾಂಶುಪಾಲ ಅಶೋಕ ರಾಜೋಳೆ, ಬಸವಾ ಪಾಟೀಲ್, ಬೀದರಿನ ಬ್ರಿಮ್ಸ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ.ಎಂ.ಪಾಟೀಲ್, ಶಾಂತಕುಮಾರ ಸಿರಗಾಪುರೆ, ಡಾ.ಸುಪ್ರಿಯಾ ಪಾಟೀಲ್, ಡಾ. ಪ್ರಭುಲಿಂಗ ಸ್ವಾಮಿ ಇತರರಿದ್ದರು.

ಸಾಗರ ನಾಯಿಕ ಸ್ವಾಗತಿಸಿದರು. ಉಮಾಕಾಂತ ವಾರದ ನಿರೂಪಣೆ ಮಾಡಿದರು. ಪ್ರಭು ಬೆಳ್ಳೂರ ವಂದಿಸಿದರು.