ಜಿಲ್ಲೆ

ಭಾರತ ಸೇವಾದಳ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳೂ ಮುಖ್ಯವಾಗಿದ್ದು, ಸ್ವಾವಲಂಬನೆ ಮತ್ತು ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಭಾರತ ಸೇವಾದಳ ಚಟುವಟಿಕೆಗಳು ಪ್ರೇರಕವಾಗಿವೆ ಎಂದು ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ ಹೇಳಿದರು.

ಮಂಗಳವಾರ ಉಡುಪಿ ಸರಕಾರಿ ಪ.ಪೂ.ಕಾಲೇಜು(ಬೋರ್ಡ್​ ಹೈಸ್ಕೂಲ್​)ನಲ್ಲಿ ಜಿಪಂ , ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಭಾರತ ಸೇವಾದಳದ ಶಿಕ್ಷಕ, ಶಿಕ್ಷಕಿಯರಿಗೆ ಒಂದು ದಿನದ ಪುನಶ್ಛೇತನ ತರಬೇತಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಅಂಡಾರು ದೇವಿಪ್ರಸಾದ್​ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಭಾರತ ಸೇವಾದಳವು ಶಾಲೆಗಳಲ್ಲಿ ಶಾಖೆಯನ್ನು ತೆರೆಯುವ ಮೂಲಕ ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಭಕ್ತಿ, ಭ್ರಾತೃತ್ವ, ರಾಷ್ಟ್ರೀಯ ಭಾವೈಕ್ಯತೆಯನ್ನು ಜಾಗೃತಿಗೊಳಿಸುವ ಮೂಲಕ ಶಿಸ್ತಿನ ಸದೃಢ ಪ್ರಜೆಗಳನ್ನು ನಿಮಾರ್ಣ ಮಾಡುತ್ತಿದೆ. ಡಿಸೆಂಬರ್​ ತಿಂಗಳಲ್ಲಿ ಭಾರತ ಸೇವಾದಳದ ಜಿಲ್ಲಾ ಭಾವೈಕ್ಯತಾ ಮಕ್ಕಳ ಮೇಳ ನಡೆಸುವ ಉದ್ದೇಶವಿದೆ ಎಂದರು.

ಭಾರತ ಸೇವಾದಳ ರಾಜ್ಯ ಸಮಿತಿಯ ನಿರ್ದೇಶಕ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿಯ ಸದಸ್ಯ ಉದಯ ಶೆಟ್ಟಿ ಬ್ರಹ್ಮಾವರ, ಬಿ.ಪುಂಡಲೀಕ ಮರಾಠೆ ಶಿರ್ವ ಮಾತನಾಡಿದರು. ಅಧ್ಯಕ್ಷತೆಯನ್ನು ಭಾರತ ಸೇವಾದಳ ಕಾಪು ತಾಲೂಕು ಅಧ್ಯಕ್ಷ ಮಧುಕರ್​ ಎಸ್​.ಕಲ್ಯಾ ವಹಿಸಿದ್ದರು. ಕಾಪು ತಾಲೂಕು ಯುವಜನ ಸೇವಾ ಅಧಿಕಾರಿ ರಿತೇಶ್​ ಶೆಟ್ಟಿ ಸೂಡ, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್​, ಜಿಲ್ಲಾ ಸಮಿತಿಯ ಸದಸ್ಯರಾದ ಎಮ್​.ಸಿ.ಆಚಾರ್​ ಕಾರ್ಕಳ, ಟಿ.ಕೃಷ್ಣಯ್ಯ ಶೆಟ್ಟಿ ಬಾರ್ಕೂರು, ಜಯಲಕ್ಷಿ$್ಮ, ಜಿಲ್ಲಾ ಕೋಶಾಧಿಕಾರಿ ದಿನಕರ ಶೆಟ್ಟಿ ಶಿರೂರು, ಅಧಿನಾಯಕರಾದ ರಾಜೇಶ್ವರಿ, ಶ್ರೀಲತಾ, ಅಬ್ದುಲ್​ ರಜಾಕ್​ ಬೆಳಪು ಉಪಸ್ಥಿತರಿದ್ದರು. ಪುನಶ್ಚೇತನ ತರಗತಿಯನ್ನು ದಿನಕರ ಶೆಟ್ಟಿ ಶಿರೂರು, ಜಿಲ್ಲಾ ಸಂಘಟಕರಾದ ಪುಷ್ಪಾವತಿ ಗೌಡ ನಡೆಸಿದರು. ತಾಲೂಕು ಅಧಿನಾಯಕ ಸತ್ಯಸಾಯಿ ಪ್ರಸಾದ್​ ಬಂಟಕಲ್ಲು ನಿರೂಪಿಸಿದರು. ಜಿಲ್ಲಾ ಸಂಘಟಕಿ ಪುಷ್ಪಾವತಿ ಗೌಡ ವಂದಿಸಿದರು.