ಅರಸೀಕೆರೆ ಕರಿಯಮ್ಮ ದೇವಿ ದೇಗುಲದ ಆವರಣದಲ್ಲಿ ಅಶ್ವತ್ಥಕಟ್ಟೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.  
ಜಿಲ್ಲೆ

ಅರಸೀಕೆರೆಯಲ್ಲಿ ಅಶ್ವತ್ಥಕಟ್ಟೆ ಉದ್ಘಾಟನೆ

ಅರಸೀಕೆರೆ: ನಗರದ ಗರುಡನಗಿರಿ ರಸ್ತೆಗೆ ಹೊಂದಿಕೊಂಡಂತಿರುವ ಶ್ರೀ ಕರಿಯಮ್ಮನವರ ಮೂಲ ಸನ್ನಿಧಾನದಲ್ಲಿ ಶುಕ್ರವಾರ ನೂತನ ಅಶ್ವತ್ಥಕಟ್ಟೆಯನ್ನು ಉದ್ಘಾಟಿಸಲಾಯಿತು.


ಕರಿಯಮ್ಮ , ಮಲ್ಲಿಗೆಮ್ಮ, ಚಲುವರಾಯ, ಧೂತರಾಯ ಸಮ್ಮುಖದಲ್ಲಿ ವಾಸ್ತು ಹೋಮ, ಲಲಿತಾ ತ್ರಿಪುರ ಸುಂದರಿ ಅಮ್ಮನವರ ಹೋಮ, ದುರ್ಗಾ ಹೋಮದ ಜತೆಗೆ ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಮಾಡಲಾಯಿತು.

ಪಂಚ ಮಾತೃಕೆಯರಾದ ಕರಿಯಮ್ಮ, ಉಡಸಲಮ್ಮ, ದೊಡ್ಡಮ್ಮ, ಪ್ಲೇಗಿನಮ್ಮ, ಚಿಕ್ಕಮ್ಮ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.