ಮಂಡ್ಯ: ಲಯನ್ಸ್ ಸಂಸ್ಥೆಯ ಬಗ್ಗೆ ವಿಶೇಷವಾದ ಗೌರವ ಹಾಗೂ ಹೆಮ್ಮೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದ ಎ ಆ್ಯಂಡ್ ಎ ಸಭಾಂಗಣದಲ್ಲಿ ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಲಯನ್ಸ್ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ಕಾರದಿಂದ ಮಾತ್ರ ಎಲ್ಲ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಲಯನ್ಸ್‌ನಂತಹ ಸಂಸ್ಥೆಗಳ ಸಹಕಾರವೂ ಮುಖ್ಯವಾಗುತ್ತವೆ. ಇಂತಹ ಸಂಸ್ಥೆಗಳು ಸಾರ್ವಜನಿಕ ಸೇವೆ ಮಾಡುವುದರಿಂದ ಸರ್ಕಾರಕ್ಕೂ ಪೂರಕವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲೂ ಕೂಡ ಲಯನ್ಸ್ ಸಂಸ್ಥೆ ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ಅನೇಕ ಕಾರ್ಯವನ್ನು ಸಂಸ್ಥೆ ಮಾಡಲಿ ಎಂದರು.
ಧನಲಕ್ಷ್ಮೀ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಗವರ್ನರ್ ಡಾ.ಎನ್.ಕೃಷ್ಣೇಗೌಡ, ಸಿ.ತ್ಯಾಗರಾಜು, ಎನ್.ಸುಬ್ರಮಣ್ಯ, ಕೆ.ದೇವೇಗೌಡ, ಜಿ.ಎ.ರಮೇಶ್, ಕೆ.ಎಲ್.ರಾಜಶೇಖರ್, ಆನಂದ್, ಟಿ.ನಾರಾಯಣಸ್ವಾಮಿ, ವಿ.ಹರ್ಷ, ಹನುಮಂತಯ್ಯ ಇತರರಿದ್ದರು.