ಮಂಡ್ಯ: ಅಗತ್ಯಯುಳ್ಳವರಿಗೆ ಸೇವೆ ಮತ್ತು ಸ್ನೇಹ ಸಲ್ಲಿಸುವುದೇ ಅಲಯನ್ಸ್ ಸಂಸ್ಥೆಯ ಪ್ರಮುಖ ಧ್ಯೇಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ ವಿ.ಭೈರಿ ಹೇಳಿದರು.
ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಮಂಡ್ಯ ಸಕ್ಕರೆನಾಡು ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಲಯನ್ಸ್ ಸಂಸ್ಥೆ ಅತಿವೇಗದಲ್ಲಿ ಬೆಳೆಯುತ್ತಿದೆ. ಭಾರತದಲ್ಲಿ ಹುಟ್ಟಿದ ಈ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸೇವಾಸಂಸ್ಥೆಗಳಲ್ಲಿ ಒಂದಾಗಿದೆ. ಇತರೆ ಸೇವಾ ಸಂಸ್ಥೆಗಳಿಗಿಂತ ಹೆಚ್ಚು ಸದಸ್ಯರನ್ನು ಪಡೆದುಕೊಳ್ಳುತ್ತಿದೆ ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಅಲಯನ್ಸ್ ಸಂಸ್ಥೆಗಳು ಅಗತ್ಯಯುಳ್ಳವರಿಗೆ ತನ್ನದೇ ಸೇವೆ ಮತ್ತು ಕೊಡುಗೆಗಳನ್ನು ನೀಡುತ್ತಿವೆ. ಸಕ್ಕರೆನಾಡು ಅಲಯನ್ಸ್ ಸಂಸ್ಥೆ ತನ್ನ ವಾರ್ಷಿಕ ವೆಚ್ಚದಲ್ಲಿ 3.28 ಲಕ್ಷ ರೂಗಳನ್ನು ವಿವಿಧ ಸೇವಾ ಕಾರ್ಯ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೆರವು, ಪ್ರೋತ್ಸಾಹ ಧನ, ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡಿದೆ ಎಂದು ತಿಳಿಸಿದರು.
ಮಂಡ್ಯ ಸಕ್ಕರೆನಾಡು ಅಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ಕೆ.ಎಂ.ಕುಮಾರ್ ಮಾತನಾಡಿ, ವೈಯಕ್ತಿಕವಾಗಿ ಸೇವೆ ಮಾಡುವುದಕ್ಕೂ ಸಂಘಟನೆ ಮೂಲಕ ಸೇವೆ ಮಾಡುವುದಕ್ಕೂ ವ್ಯತ್ಯಾಸವಿದೆ. ಸಂಘಟನೆ ಮೂಲಕ ಸಮಾಜಿಮುಖಿಯಾಗಿ ಸೇವೆ ಸಲ್ಲಿಸಿದರೆ ಉತ್ತಮ ನಾಯಕತ್ವ ಗುಣ ಬೆಳೆಯುತ್ತದೆ. ನಮ್ಮ ಮುಂದಿನ ಅವಧಿಯಲ್ಲಿ ಪರಿಸರ ಕಾಳಜಿಗಾಗಿ ಸಸಿ ನೆಡುವುದು, ಸರ್ಕಾರಿ ಶಾಲೆ ಸಬಲೀಕರಣ ಮತ್ತು ವಿದ್ಯಾರ್ಥಿಗಳಿಗೆ ನೆರವು, ಆರೋಗ್ಯ ಕ್ಷೇತ್ರದಲ್ಲಿ ಕ್ಯಾನ್ಸರ್ ಅರಿವು ಶಿಬಿರ ಆಯೋಜನೆ, ದುರ್ಬಲರಿಗೆ ಅಗತ್ಯವಸ್ತುಗಳ ನೀಡುವುದು ಧ್ಯೇಯವಾಗಿದೆ ಎಂದು ತಿಳಿಸಿದರು.
ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಜಿಲ್ಲಾ ಗರ್ವನರ್ ಎಚ್.ಮಾದೇಗೌಡ, 1ನೇ ಉಪ ಗವರ್ನರ್ ಕೆ.ಆರ್.ಶಶಿಧರ್ ಈಚಗೆರೆ, 2ನೇ ಉಪ ಗವರ್ನರ್ ಕೆ.ಎಸ್.ಚಂದ್ರಶೇಖರ್, ಪ್ರಾಂತೀಯ ಅಧ್ಯಕ್ಷ ಟಿ.ಎಸ್.ರಕ್ಷಿತ್‌ರಾಜ್, ಮಾಜಿ ಅಧ್ಯಕ್ಷೆ ಸಿ.ಕೆ.ನವ್ಯಶ್ರೀ, ಖಜಾಂಚಿ ಕೆ.ಎಂ.ಸಿದ್ದರಾಜು, ಎಂ.ಲೋಕೇಶ್ ಇತರರಿದ್ದರು.