ಜಿಲ್ಲೆ

ದೇವರನ್ನು ಒಲಿಸಲು ಭಜನೆ ಸುಲಭದ ಮಾರ್ಗ

ಹೆಬ್ರಿ: ಅಂತರಾತ್ಮದೊಂದಿಗೆ ಸಖ್ಯ ಬೆಳೆಸಿ ಭಕ್ತಿಯ ಪರಿಪೂರ್ಣತೆ ಬೆಳೆಸಿಕೊಂಡು ಭಗವಂತನನ್ನು ಭಜಿಸಿದಾಗ ಭಗವಂತ ಖಂಡಿತವಾಗಿ ಸಂವಹಿಸುತ್ತಾನೆ. ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಸುಲಭದ ದಾರಿ ಎಂದು ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಹೇಳಿದರು.

ಮಲ್ಪೆ ಪಡುಕರೆಯ ಶ್ರೀದೇವಿ ಭಜನಾ ಮಂದಿರ ಪರಿಸರದ ಕಡಲತಡಿಯಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ, ಪೆರ್ಡೂರು ಹಾಗೂ ಮಲ್ಪೆ ಮತ್ಸೃರಾಜ್ ಗ್ರೂಪ್ ಸಹಯೋಗದಲ್ಲಿ ಶ್ರೀದೇವಿ ಭಜನಾ ಮಂದಿರದ ಸಹಕಾರದಲ್ಲಿ ಉಡುಪಿ-ದ.ಕ. ಜಿಲ್ಲಾಮಟ್ಟದ ಆಯ್ದ ತಂಡಗಳ ಭಜನಾ ಜುಗಲ್‌ಬಂದಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿಗಳಾದ ನಾಗರಾಜ ಸುವರ್ಣ, ಶೇಖರ್ ಪುತ್ರನ್, ಮತ್ಸೃರಾಜ್ ಗ್ರೂಪ್ ಅಧ್ಯಕ್ಷ ಕೇಶವ ಎಂ.ಕೋಟ್ಯಾನ್, ಅಭಿನಂದನ್ ಕೋಟ್ಯಾನ್, ಶ್ರೀದೇವಿ ಭಜನಾ ಮಂದಿರ ಗೌರವಾಧ್ಯಕ್ಷ ಗಂಗಾಧರ್ ಜಿ., ಅಧ್ಯಕ್ಷ ಗಿರೀಶ್ ಎ.ಕುಂದರ್, ಶ್ರೀದೇವಿ ಆಂಜನೇಯ ಫ್ರೆಂಡ್ಸ್‌ನ ಹೇಮಂತ್ ಖಾರ್ವಿ, ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಕಾರ್ಯದರ್ಶಿ ರವೀಂದ್ರ ನಾಡಿಗ್, ತೀರ್ಪುಗಾರರಾದ ರಾಧಾಕೃಷ್ಣ ಭಟ್ ಕುತ್ಪಾಡಿ, ಉಷಾ ಹೆಬ್ಬಾರ್, ಅಕ್ಷತಾ ವಿಶುರಾವ್ ಹಾವಂಜೆ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು, ಪ್ರಭಾಕರ ಶೆಟ್ಟಿ ಸ್ವಾಗತಿಸಿದರು.