ಜಿಲ್ಲೆ

ಸಂಕೀರ್ತನೆ ಕಲಿಯುಗದ ಪ್ರಧಾನ ಯಜ್ಞ: ಪುತ್ತಿಗೆ ಶ್ರೀ

ಉಡುಪಿ: ಕಲೌ ಸಂಕೀರ್ತನಪ್ರಾಯೈ: ಯಜಂತಿ ಸ್ಮ ಸುಮೇಧಸ: ಎಂಬ ಸಂದೇಶದಂತೆ ಕಲಿಯುಗದಲ್ಲಿ ಸಂಕೀರ್ತನ ಯಜ್ಞ ಬಹು ಮುಖ್ಯವಾಗಿದೆ. ಅತಿ ಸುಲಭವಾಗಿ ಭಗವಂತನ ಪರಮಾನುಗ್ರಹ ಪಡೆಯಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗೀತಾಮಂದಿರದ ಮುಂಭಾಗದಲ್ಲಿ ತುಳಸೀ ಸಂಕೀರ್ತನೆ ಉದ್ಘಾಟಿಸಿ ಮಾತನಾಡಿದರು. ಸಂಕೀರ್ತನೆಯ ಪವಿತ್ರವಾದ ಯಜ್ಞದ ಮಹತ್ವವನ್ನು ಶ್ರೀವಾದಿರಾಜಗುರುಸಾರ್ವಭೌಮರು ಜನಸಾಮಾನ್ಯವರೆಗೂ ತಲುಪಸಿದರು. ಇದರ ಪ್ರಭಾವದಿಂದ ಸಂಕೀರ್ತನೆ ಇಂದು ಕರಾವಳಿಯ ಪ್ರದೇಶದಲ್ಲಿ ಮನೆ ಮನೆಗಳಲ್ಲಿ ವ್ಯಾಪಕವಾಗಿದೆ ಎಂದು ಹೇಳಿದರು. ಕಿರಿಯ ಶ್ರೀ ಸುಶ್ರೀಂದ್ರತಿರ್ಥಶ್ರೀಪಾದರು ಉಪಸ್ಥಿತರಿದ್ದರು. ಶ್ರೀ ಪುತ್ತಿಗೆ ವಿದ್ಯಾಪಿಠದ ವಿದ್ಯಾರ್ಥಿಗಳಿಂದ ಸಂಕೀರ್ತನೆ ನಡೆಯಿತು.