ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿಯ ಗ್ರಾಮ ಘಟಕವನ್ನು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಜಶೇಖರ ಮೂರ್ತಿ ಉದ್ಘಾಟಿಸಿದರು. ಕೃಷ್ಣೇಗೌಡ, ಟಿ.ಎಲ್.ಮಹೇಶ್, ಆರ್.ಕೃಷ್ಣ, ಅಂಬೂಜಿ, ವಿಜೇಂದ್ರಕುಮಾರ್, ರಾಮಯ್ಯ, ಗಿರಿಧರ, ಸ್ವಾಮಿ, ಅಶೋಕ್ ಇದ್ದರು. 
ಜಿಲ್ಲೆ

ದಲಿತರಿಗೆ ಶಿಕ್ಷಣ, ಉದ್ಯೋಗದಲ್ಲಿ ಪ್ರಾಧಾನ್ಯತೆ ಸಿಗಲಿ

ಮದ್ದೂರು: ಸಮಾಜದಲ್ಲಿ ದಲಿತರ ಹಕ್ಕುಗಳನ್ನು ರಾಜ್ಯ ಸರ್ಕಾರ ಕಾಯಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಶೇಖರ ಮೂರ್ತಿ ತಿಳಿಸಿದರು.

ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿಯ ಗ್ರಾಮ ಘಟಕವನ್ನು ಭಾನುವಾರ ಉದ್ಘಾಟಿಸಿದ ನಂತರ ಹೋಬಳಿ ಮಟ್ಟದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಲಿತರಿಗೆ ನಿವೇಶನಗಳು ದೊರೆಯುವಂತಾಗಬೇಕು, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರಾಧಾನ್ಯತೆ ಸಿಗಬೇಕು. ಅಸ್ಪೃಶ್ಯತೆ ತೊಲಗಿ, ಸಮಾನತೆ ಮೂಡಬೇಕು. ಆಗಷ್ಟೇ ಡಾ.ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ. ದಲಿತರ ಅಭಿವೃದ್ಧಿಗೆ ಮೀಸಲಿಡುವ ಹಣವನ್ನು ರಾಜ್ಯ ಸರ್ಕಾರ ಇತರ ಯೋಜನೆಗಳಿಗೆ ಬಳಸಬಾರದು ಎಂದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ, ಜಾತಿ ವ್ಯವಸ್ಥೆ ಕೊನೆಯಾಗಬೇಕು, ಇನ್ನೂ ಎಷ್ಟೋ ಗ್ರಾಮಗಳಲ್ಲಿ ದಲಿತರು ದೇವಸ್ಥಾನಕ್ಕೆ ಹೋಗಲು ಪ್ರವೇಶ ಇಲ್ಲದೆ ಸಂಕುಚಿತ ವಾತಾವರಣವಿದೆ. ಎಷ್ಟೋ ದಲಿತ ಕೇರಿಗಳ ಅಭಿವೃದ್ಧಿಯಾಗಿಲ್ಲ, ಹಲವೆಡೆ ಅಂಬೇಡ್ಕರ್ ಭವನಗಳು ಇಲ್ಲ. ಎಲ್ಲ ಜಾತಿಗಳ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.

ಗ್ರಾಮ ಘಟಕದ ಅಧ್ಯಕ್ಷ ಟಿ.ಎಲ್.ಮಹೇಶ್ ಮಾತನಾಡಿದರು. ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಕಾರ್ಯದರ್ಶಿ ಅಂಬೂಜಿ, ಮುಖಂಡರಾದ ವಿಜೇಂದ್ರಕುಮಾರ್, ಹುರುಗಲವಾಡಿ ರಾಮಯ್ಯ, ಗಿರಿಧರ, ಸ್ವಾಮಿ, ಗ್ರಾ. ಪಂ ಸದಸ್ಯ ಅಶೋಕ್ ಇದ್ದರು.