ಜಿಲ್ಲೆ

ಭಗದ್ಗೀತೆಗೆ ವಿಶ್ವಮಟ್ಟದಲ್ಲಿ ಸ್ವೀಕೃತಿ

ಉಡುಪಿ: ಗೀತೆ ಬಗ್ಗೆ ವಿಶ್ವ ಮಟ್ಟದಲ್ಲಿ ಸ್ವೀಕೃತಿಯನ್ನು ಕಾಣಬಹುದು. ಗೀತಾ ಲೇಖನ ಸಾಮಾನ್ಯ ಕೆಲಸವಲ್ಲ. ಗೀತೆ ಬರೆಯುತ್ತಾ ಗೀತಾರ್ಥವನ್ನು ತಿಳಿದುಕೊಳ್ಳುವ ಮತ್ತು ಅದನ್ನು ಜೀವನದಲ್ಲಿ ಅಳವಡಿಸಕೊಳ್ಳುವ ಅಪೂರ್ವ ಅವಕಾಶವನ್ನು ಪುತ್ತಿಗೆ ಶ್ರೀಗಳು ಒದಗಿಸಿದ್ದಾರೆ ಎಂದು ನವದೆಹಲಿಯ ಸ್ವಾಮಿ ನಾರಾಯಣ ?ರಿಸರ್ಚ್​ ಇನ್​ಸ್ಟಿಟ್ಯೂಟ್​ ಮುಖ್ಯಸ್ಥ, ಮಹಾಮಹೋಪಾಧ್ಯಾಯ ಶ್ರೀ ಭದ್ರೇಶ ದಾಸ್​ ಜೀ ಮಹಾರಾಜ್​ ಹೇಳಿದರು.

ಪರ್ಯಾಯ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣಮಠ ಆಶ್ರಯದಲ್ಲಿ ವಿಶ್ವ ಗೀತಾ ಪರ್ಯಾಯದ ಬೃಹತ್​ ಗೀತೋತ್ಸವ ಉದ್ಘಾಟಿಸಿ ಮಾತನಾಡಿದರು. ದುಯೋರ್ಧನ ಲೌಖಿಕ ಶಕ್ತಿಯಿಂದ ವಿಜಯ ಸಾಧಿಸಬಹುದು ಎಂಬುದಾಗಿ ಭಾವಿಸಿದ್ದ. ಹೀಗಾಗಿ ಕೃಷ್ಣನಲ್ಲಿ ನಾರಾಯಣೀ ಸೇನೆಯ ಸಹಾಯವನ್ನು ಯಾಚಿಸಿದ್ದ. ಆದರೆ ಅರ್ಜುನ ಅಲೌಖಿಕ ಶಕ್ತಿ ಮೇಲೆ ನಂಬಿಕೆ ಹೊಂದಿದ್ದು, ಕೃಷ್ಣನೊಬ್ಬನೇ ಜೊತೆಗಿರುವಂತೆ ನೋಡಿಕೊಂಡಿದ್ದ. ಅತೀ ಉತ್ಸಾಹಿ ಅರ್ಜುನ ಯುದ್ಧಭೂಮಿಯನ್ನು ಶಸ್ತ್ರತ್ಯಾಗಕ್ಕೆ ಮುಂದಾದ ಸಂದರ್ಭದಲ್ಲಿ ರೋಗಿಗೆ ವೈದ್ಯನೊಬ್ಬ ಚಿಕಿತ್ಸೆ ನೀಡುವಂತೆ ಕೃಷ್ಣ ಗೀತೋಪದೇಶದಿಂದ ಅಜ್ಞಾನವನ್ನು ದೂರಗೊಳಿಸಿದ್ದಾನೆ ಎಂದರು.

ಕೃಷ್ಣ ಪ್ರೀತಿ ಜನಕ ಗ್ರಂಥ ಗೀತೆ

ಗೀತಾಧ್ಯಾಯನದಿಂದ ಕೃಷ್ಣಾನುಗ್ರಜ ಪ್ರಾಪ್ತಿಯಾಗುತ್ತದೆ. ಬೇರೆ ಯಾವುದೇ ಗ್ರಂಥಗಳಿಗೆ ಜಯಂತಿ ಆಚರಿಸುವುದಿಲ್ಲ. ಗೀತೆಗೆ ಈ ಭಾಗ್ಯ ಲಭಿಸಿದೆ. ಭಗವಂತನನ್ನು ಸ್ವಾಮಿತ್ವ ರೀತಿಯಲ್ಲಿ ಉಪಾಸನೆ ಮಾಡಬೇಕು ಎಂಬುದು ಸಮಗ್ರ ಮನುಷ್ಯ ಕುಲಕ್ಕೆ ಕೃಷ್ಣ ನೀಡಿದ ಸಂದೇಶ ಗೀತೆ. ಗೀತಾ ಜಯಂತಿಗೆ ಸರ್ಕಾರ ರಜೆ ಘೋಷಿಸಬೇಕು. ರ್​ ರ್​ ಗೀತಾ ಅಭಿಯಾನ ನಡೆಯಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಆಶಯವ್ಯಕ್ತಪಡಿಸಿದರು.

"ಮಹಾಭಾರತ' ಧಾರಾವಾಹಿ ಕೃಷ್ಣ ಪಾತ್ರಧಾರಿ, ಹಿರಿಯ ನಟ ನಿತೀಶ್​ ಭಾರದ್ವಾಜ್​ ಮಾತನಾಡಿ, ಜೀವನದಲ್ಲಿ ಕಷ್ಟಗಳಿಂದ ಪಾರಾಗಲು ಅಧ್ಯಾತ್ಮ ವಿದ್ಯೆಯೇ ಉತ್ತಮ ಮಾರ್ಗ. ಗೀತೆಯ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗೀತೆ ಕರ್ಮ ಮಾರ್ಗದ ತಿಳುವಳಿಕೆ ನೀಡುವುದರಿಂದ ಕೃಷ್ಣ ಭಕ್ತಿ ಅಂಧಶ್ರದ್ಧೆಗೆ ಕಾರಣವಾಗುವುದಿಲ್ಲ. ಬದಲಿಗೆ ಎಲ್ಲಾ ಕಾರ್ಯಗಳೂ ಧರ್ಮಶ್ರದ್ಧೆಯಿಂದ ನಡೆಯುತ್ತವೆ ಎಂದರು.

ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ?ಅಭ್ಯಾಗತರಾಗಿ ನಿರೂಪಕ ಮಾಸ್ಟರ್​ ಆನಂದ್​, ಉದ್ಯಮಿ ಭುವನೇಂದ್ರ ಕಿದಿಯೂರು ಮತ್ತು ಶತಾವಧಾನಿ ಡಾ. ರಾಮನಾಥ ಆಚಾರ್ಯ , ದಿವಾನ್​ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯಿಂದ ಹೊರತರಲಾದ ಗೀತಾ ಜಯಂತಿ ವಿಶೇಷ ಅಂಚೆಲಕೋಟೆಯನ್ನು ?ಕರ್ನಾಟಕ ವೃತ್ತ ಮುಖ್ಯ ?ಪೋಸ್ಟ್​ ಮಾಸ್ಟರ್​ ಜನರಲ್​ ಎಸ್​. ರಾಜೇಂದ್ರಕುಮಾರ್​ ಬಿಡುಗಡೆಗೊಳಿಸಿದರು. ವಿದ್ವಾನ್​ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿ, ಷಣ್ಮುಖ ಹೆಬ್ಬಾರ್​ ಸ್ವಾಗತಿಸಿದರು.