ಗುರುಪೂರ್ಣಿಮೆ ಕಾರ್ಯಕ್ರಮವನ್ನು ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಉದ್ಘಾಟಿಸಿದರು.ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ, ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್ ಇದ್ದರು. 
ಜಿಲ್ಲೆ

ಸಂಸ್ಕಾರ ನೀಡುವ ತಾಯಿ ಮೊದಲ ಗುರು, ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಅಭಿಮತ

ಮಂಗಳೂರು: ಹೊತ್ತು, ಹೆತ್ತು, ಸಂಸ್ಕಾರ ನೀಡುವ ತಾಯಿಯೇ ಮಗುವಿನ ಪಾಲಿಗೆ ಮೊದಲ ಗುರು. ಜೀವನದ ಪ್ರತಿಯೊಂದು ಕ್ಷಣವೂ ನಾವು ಸುತ್ತಲಿನ, ಪ್ರಾಣಿ, ಪಕ್ಷಿ ಮನುಷ್ಯರಿಂದ ಬಹು ವಿಧದ ಜ್ಞಾನ ಗಳಿಸುತ್ತೇವೆ. ನಮಗೆ ವಿದ್ಯೆ ಬುದ್ಧಿ ಕಲಿಸುವ, ವಿವಿಧ ವಿಷಯಗಳಲ್ಲಿ ಜ್ಞಾನ ನೀಡುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರುಪೂರ್ಣಿಮೆ ಎಂದು ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.

ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಬುಧವಾರ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ, ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್, ಶಾರದಾ ವಿದ್ಯಾಲಯದ ಹಿರಿಯ ಪ್ರಾಂಶುಪಾಲೆ ಸುನೀತಾ. ವಿ. ಮಡಿ, ಪ್ರಾಂಶುಪಾಲ ದಯಾನಂದ ಕಟೀಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕುಮಾರಿ ತನಿಷ್ಕಾ ಎಂ. ಗುರು ಪೂರ್ಣಿಮೆ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ಕೌಶಿಕ್.ವಿ.ಬಿ ಸ್ವಾಗತಿಸಿ, ಅದಿತಿ ಪ್ರಭು ವಂದಿಸಿದರು. ಸ್ತುತಿ ಯಾಜಿ. ಕಾರ್ಯಕ್ರಮ ನಿರೂಪಿಸಿದರು.