ಸುಬ್ರಹ್ಮಣ್ಯ: ಮಹಿಳೆಯರು ಅಬಲೆಯರಲ್ಲ ಸಬಲೆಯರು. ತಮ್ಮ ಸ್ವಂತ ದುಡಿಮೆಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮರ್ಥರು. ಮಹಿಳೆಯರು ಸ್ವಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಬೇಕು. ತಾವು ದುಡಿಯುವುದರೊಂದಿಗೆ ಇತರರಿಗೆ ತರಬೇತಿ ನೀಡಿ ಸ್ವಾವಲಂಬಿ ಬದುಕು ನಡೆಸಲು ಮಾರ್ಗದರ್ಶಕರಾಗುತ್ತಿರುವುದು ಶ್ಲಾನೀಯ ಎಂದು ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನುಡಿದರು.
ಸುಬ್ರಹ್ಮಣ್ಯದಲ್ಲಿ ಆರಂಭಗೊಂಡ ಪಿಂಕಿ ಡಿಸೈನಿಂಗ್ ಮತ್ತು ಟೈಲರಿಂಗ್ ತರಬೇತಿ ಸೇವಾ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌವ್ಯಾ ಭರತ್ ಸೇವಾ ಸಂಸ್ಥೆಯನ್ನು ಉದ್ಘಾಟಿಸಿದರು. ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ಗುತ್ತಿಗಾರು ವಲಯಾಧ್ಯಕ್ಷ ಅಧ್ಯಕ್ಷ ಮಾಧವ ಶೆಟ್ಟಿಗಾರ್, ಪೂರ್ವಾಧ್ಯಕ್ಷ ಆರ್.ಕೆ. ದೀಪ ಬೆಳಗಿದರು.
ಪ್ರಮುಖರಾದ ಸುಮಿತ್ರಾ, ಮುರಳೀಧರ, ಸುಬ್ರಹ್ಮಣ್ಯ, ಚಂಚಲಾಕ್ಷಿ, ಪ್ರಕಾಶ್ ಸುಬ್ರಹ್ಮಣ್ಯ, ಮಾಧವ ದೇವರಗದ್ದೆ ಉಪಸ್ಥಿತರಿದ್ದರು.