ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ತೋಡಿನ ನೀರು ರಸ್ತೆ ಹಾಗೂ ಅಟೋರಿಕ್ಷಾ ತಂಗುದಾಣಕ್ಕೆ ನುಗ್ಗಿದ್ದು, ಕೆಸರು ಮಣ್ಣು ರಸ್ತೆಗೆ ಬಂದು ನಿಂತಿದೆ. ಕಡಬ ಭಾಗದ ಗ್ರಾಮೀಣ ಭಾಗದ ಹೊಳೆ, ತೋಡು, ನದಿಗಳು ತುಂಬಿ ಹರಿಯುತ್ತಿದ್ದು ಪಕ್ಕದ ಭೂಮಿಗಳಿಗೆ ನೀರು ನುಗ್ಗಿದೆ.
ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಮಧ್ಯಾಹ್ನ ವೇಳೆಗೆ ತೋಡಿನ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಯಿತು. ಸಾಯಂಕಾಲ ವೇಳೆಗೆ ನೀರು ತೆರವುಗೊಂಡು ಸಂಚಾರ ಅರಂಭವಾಯಿತು.