ಸಂಬರಗಿ: ಸಮೀಪದ ಜಂಬಗಿ ಗ್ರಾಮದ ಮಾಳಿನಗರದಲ್ಲಿ ಹನುಮಾನ್ ಜಯಂತಿ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಜ್ಯ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ಚಾಂಪಿಯನ್ ಶ್ರೀಮಂತ್ ಭೋಸಲೆ ಹಾಗೂ ಹಾಜಿ ಇರಾನ್ ನಡುವಿನ ಸೆಣಸಾಟದಲ್ಲಿ ಭೋಸಲೆ ಪರಾಕ್ರಮ ಮೆರೆದು 3 ಲಕ್ಷ ರೂ. ನಗದು ಹಾಗೂ ಆಂಜನೇಯ ಟ್ರೋಫಿ ತಮ್ಮದಾಗಿಸಿಕೊಂಡರು.
ಕುಸ್ತಿಪಟು ಮಹೇಶಕುಮಾರ್ ಅಥಾಣಿ ಬೆಳ್ಳಿ ಗದೆ ಪಡೆದು ಗೆದ್ದು ವಿಜಯ ಸಾಧಿಸಿದರು. ರಕ್ ಬೆಳಗಾವಿ ಮತ್ತು ನಿಕಿತಾ ಮುರಗುಂಡಿ ಸ್ಪರ್ಧೆಯಲ್ಲಿ ನಿಖಿತಾ ವಿಜಯಶಾಲಿಯಾದರು. ಪವನ ಕುಮಾರ್ ಹರಿಯಾಣ, ಓಂಕಾರ್ ವಾಮಾರೆ, ಮಿಲನ್ ಇರಾನ್, ಶಿವಯ್ಯ ಪೂಜಾರಿ ಮುಂತಾದ ಖ್ಯಾತ ಕುಸ್ತಿಪಟುಗಳು ಸ್ಪರ್ಧಿಸಿದ್ದರು. 64 ಕುಸ್ತಿ ಪಂದ್ಯಗಳು ನಡೆದವು. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ಕುಸ್ತಿಪಟುಗಳು ಆಗಮಿಸಿದ್ದರು.
ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಪಂದ್ಯ ಉದ್ಘಾಟಿಸಿ ಮಾತನಾಡಿ, ಮಾಣಿಕ್ ಸೂರ್ಯವಂಶಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಪ್ರತಿಯೊಂದು ಕುಟುಂಬದಲ್ಲೂ ಕುಸ್ತಿಪಟು ಹುಟ್ಟಬೇಕು ಮತ್ತು ಶಿಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಹನುಮಾನ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯ ಮಾಣಿಕ್ ಸೂರ್ಯವಂಶಿ, ಕೃಷ್ಣಾಜಿ ಸೂರ್ಯವಂಶಿ, ಹುಬ್ಬಳ್ಳಿ ಗ್ರಾಮೀಣ ಕೆಎಸ್ಆರ್ಟಿಸಿ ವ್ಯವಸ್ಥಾಪಕ ಪಾಂಡುರಂಗ
ಕಿರಣಗಿ ಆಗಮಿಸಿದ್ದರು.