ಬೆಳಗಾವಿ ಕೆ.ಎಲ್.ಇ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಡಾ.ವಾಣಿಶ್ರೀ ಬುಬ್ನಾಳೆ ಉದ್ಘಾಟಿಸಿದರು. ಡಾ.ಸುನೀಲ ಜಲಾಲಪುರೆ, ಡಾ.ಪದ್ಮಜಾ ವಾಳ್ವೇಕರ, ಡಾ.ಡಿ.ಎನ್. ಶಾಸ್ತ್ರಿ, ಗೀತಾಂಜಲಿ ಸಾಲಿಮಠ, ಡಾ. ಜ್ಯೋತಿ ಇದ್ದರು. 
ಜಿಲ್ಲೆ

ತರಬೇತಿಯಲ್ಲಿ ಯುಡಿಇಎಚ್‌ಪಿ ಪಾತ್ರ ಅನನ್ಯ

ಬೆಳಗಾವಿ: ಯೂನಿವರ್ಸಿಟಿ ಡಿಪಾರ್ಟ್‌ಮೆಂಟ್ ಆಫ್ ಎಜುಕೇಶನ್ ಫಾರ್ ಹೆಲ್ತ್ ಪ್ರೊಫೆಷನಲ್ಸ್ (ಯುಡಿಇಎಚ್‌ಪಿ) ಸಹಭಾಗಿತ್ವದಲ್ಲಿ ನ1ರದ ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ‘ಎಫೆಕ್ಟಿವ್ ಪ್ರಿನ್ಸಿಪಲ್ಸ್ ಪ್ರ್ಯಾಕ್ಟೀಸ್ ಫಾರ್ ಎನ್ಹ್ಯಾನ್ಸಸ್ಡ್ ಸ್ಟುಡೆಂಟ್ ಲರ್ನಿಂಗ್ ಆ್ಯಂಡ್ ಮೋಟಿವೇಷನ್’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತು.

ಯುಡಿಇಎಚ್‌ಪಿ ಉಪನಿರ್ದೇಶಕಿ ಡಾ.ವಾಣಿಶ್ರೀ ಬುಬ್ನಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಣಾಮಕಾರಿ ಬೋಧನೆಗಾಗಿ ಶಿಕ್ಷಕರನ್ನು ತರಬೇತಿಗೊಳಿಸುವಲ್ಲಿ ಯುಡಿಇಎಚ್‌ಪಿ ಪಾತ್ರ ಪ್ರಮುಖವಾಗಿದೆ ಎಂದರು. ಪ್ರಾಚಾರ್ಯ ಡಾ.ಸುನೀಲ ಜಲಾಲಪುರೆ ಅವರು ಕಾರ್ಯಾಗಾರದ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸುವಲ್ಲಿ ಪ್ರೇರಣೆಯ ಪ್ರಾಮುಖ್ಯತೆ ಮತ್ತು ಚಟುವಟಿಕೆ ಆಧಾರಿತ ಬೋಧನೆ-ಕಲಿಕೆಯ ವಿಧಾನಗಳ ಅಗತ್ಯತೆ ತಿಳಿಸಿದರು.

ಡಾ.ಡಿ.ಎನ್. ಶಾಸ್ತ್ರಿ, ಗೀತಾಂಜಲಿ ಸಾಲಿಮಠ, ಡಾ.ಜ್ಯೋತಿ ನಾಗಮೋತಿ, ಡಾ.ಪದ್ಮಜಾ ವಾಳ್ವೇಕರ, ಗೀತಾಂಜಲಿ ಸಾಲಿಮಠ, ಡಾ. ಶಿಲ್ಪಾ ಬೀಮಳ್ಳಿ ಹಾಗೂ ಕಾಹೆರ್‌ನ ವಿವಿಧ ಘಟಕ ಮತ್ತು ಇತರ ಕಾಲೇಜುಗಳ ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಡಾ.ಡಿ.ಎನ್. ಶಾಸ್ತ್ರಿ ವಂದಿಸಿದರು.