ರಾಮದುರ್ಗ: ರೈತರಿಗಾಗಿ ಇರುವ ಪಿಎಲ್‌ಡಿ ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಹಕಾರ ನೀಡಿದಲ್ಲಿ ರೈತಪರ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಹೂಲಗೇರಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಮದುರ್ಗ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ, 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಡಿಮೆ ಬಡ್ಡಿ ದರದಲ್ಲಿ ರೈತರ ಆರ್ಥಿಕ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ರೈತರು ಅವುಗಳ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಆಡಳಿತ ಮಂಡಳಿ ರೈತರ ಪ್ರಗತಿಗಾಗಿ ಬದ್ಧವಿದ್ದು, ರೈತರು ಬ್ಯಾಂಕ್ ವ್ಯವಹಾರಗಳಿಗೆ ಸಹಕಾರ ನೀಡಬೇಕು ಎಂದರು.
ಬ್ಯಾಂಕ್ ಒಂದು ವರ್ಷದಲ್ಲಿ ಸಾಧಿಸಿದ ಪ್ರಗತಿ ಹಾಗೂ ವ್ಯವಹಾರಗಳ ಕುರಿತು ವ್ಯವಸ್ಥಾಪಕ ಎಲ್.ವೈ. ಮಳಲಿ ವರದಿ ಮಂಡಿಸಿದರು. ಬ್ಯಾಂಕ್ ಉಪಾಧ್ಯಕ್ಷೆ ಪುಷ್ಪಾ ಮುರಗೋಡ, ನಿರ್ದೇಶಕರಾದ ಶಾಂತಯ್ಯ ಅರುಟಗಿ, ಫಕೀರಪ್ಪ ದಾಡಿಬಾವಿ, ಸಿದ್ದನಗೌಡ ಪಾಟೀಲ, ಬುಡ್ಡೆಸಾಬ ಮುಜಾವರ, ಜಾನಪ್ಪ ಹಕಾಟಿ, ಮಹಾದೇವಪ್ಪ ಶರಮಗೊಂಡ, ಗುರುನಾಥ ಹೂಗಾರ, ಮಲ್ಲನಗೌಡ ಸುರಗ, ಶಾಂತವ್ವ ಕಂಬಾರ, ದಾನಪ್ಪ ಲಮಾಣಿ, ಅಕ್ಷಯಕುಮಾರ ಜಂಬಗಿ, ಮಹೇಶ ಹೊಸೂರ, ಬ್ಯಾಂಕ್ ಸಿಬ್ಬಂದಿಗಳಾದ ಶಿವಾನಂದ ಮಾದರ, ಆರ್.ಎಸ್. ಜವಳಿ, ಕುಮಾರ ಬೆಟಗೇರಿ, ಐ.ಬಿ. ಗಾಣಿಗೇರ, ಶೋಭಾ ಕಣದಾಳಿ ಇತರರು ಇದ್ದರು.