ಜಿಲ್ಲೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ವಿಚಾರದಲ್ಲಿ ಇದೀಗ ದಕ್ಷಿಣ ಭಾರತದ ಮೊದಲ ಏರ್‌ಪೋರ್ಟ್‌!; ಯಾಕೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಉತ್ತರ ರನ್‌ವೇ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಗುರುವಾರದಿಂದ ರನ್ ವೇಯನ್ನು ಸೇವೆಗೆ ಮುಕ್ತಗೊಳಿಸಲಾಗಿದೆ.

ನವೀಕರಣ ರನ್‌ವೇಯೊಂದಿಗೆ ದಕ್ಷಿಣ ಭಾರತದಲ್ಲಿ ಸಮಾನಾಂತರ ರನ್ ವೇ ಹೊಂದಿರುವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ. ಎಲ್‌ಇಡಿ ಸೆಂಟರ್ ಲೈನ್ ಲೈಟಿಂಗ್, ಇನ್‌ಸೆಟ್ ರನ್ ವೇ ಎಡ್ಜ್ ಲೈಟ್, ಟ್ಯಾಕ್ಸಿ ವೇ ಸೆಂಟರ್‌ಲೈನ್ ಲೈಂಟಿಂಗ್ ಮತ್ತು ಎರಡು ಹೊಸ ಮಿಡ್‌ಪಾಯಿಂಟ್ ಟ್ರಾನ್ಸ್‌ಮಿಸೋ ಮೀಟರ್‌ಗಳನ್ನು ಅಳವಡಿಸಿ ರನ್ ವೇಯನ್ನು ನವೀಕರಿಸಲಾಗಿದೆ. ಅದರಿಂದ ರನ್ ವೇ ಕಾರ್ಯಕ್ಷಮತೆ ಹೆಚ್ಚಾಗಿದೆ.

2019ರಲ್ಲಿ ದಕ್ಷಿಣ ರನ್ ವೇಯನ್ನು ಕ್ಯಾಟ್ ತ್ರಿಬಿ ನಿಯಮಾನುಸಾರ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಉತ್ತರ ರನ್ ವೇಯನ್ನ ಕ್ಯಾಬ್ ಒನ್ ನಿಯಮಾನುಸಾರ ಮೇಲ್ದರ್ಜೆಗೇರಿಸಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.