ಕಂಪ್ಲಿ ತಾಲೂಕು ಮೆಟ್ರಿ ಗ್ರಾಮದಲ್ಲಿ ಮಹಾದೇವತಾತನ ಪುಣ್ಯಸ್ಮರಣೆ ಅಂಗವಾಗಿ ಉಚ್ಚಾಯ ಎಳೆಯಲಾಯಿತು. 
ಜಿಲ್ಲೆ

ಮೆಟ್ರಿಯಲ್ಲಿ ಮಹಾದೇವ ತಾತನ ಪುಣ್ಯಸ್ಮರಣೆ

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಶ್ರೀ ವಿಶ್ವಾರಾಧ್ಯ ಗುರುಕುಲ ಮಠದ ಪ್ರಣವಜ್ಯೋತಿ ಮಹಾಕ್ಷೇತ್ರ ಸಂಸ್ಥಾಪಕ ಹಂದ್ಯಾಳುಮಠದ ಮಹಾದೇವ ತಾತನ 41ನೇ ಪುಣ್ಮಸ್ಮರಣೆ ಬುಧವಾರ ಆಚರಿಸಲಾಯಿತು.

ಪುಣ್ಯಸ್ಮರಣೆ ಅಂಗವಾಗಿ ಶ್ರೀಮಠದಲ್ಲಿ ಕರ್ತೃ ಗದ್ದುಗೆ, ಪ್ರಣವಜ್ಯೋತಿ ಪಂಚಪೀಠಾಧೀಶ್ವರರ ವಿಗ್ರಹಗಳಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ, ಗಣಾರಾಧನೆ ನೆರವೇರಿಸಲಾಯಿತು. ಸಂಜೆ ತಾತನ ಉಚ್ಚಾಯ ಶ್ರೀಮಠದಿಂದ ಬಸವಣ್ಣನಪೇಟೆ ಎದುರು ಬಸವಣ್ಣ ಕಟ್ಟೆಯವರೆಗೆ ಎಳೆಯಲಾಯಿತು.

ಮಂಗಳವಾದ್ಯ, ಸಮ್ಮಾಳ ಮೇಳ ಮೆರುಗು ಹೆಚ್ಚಿಸಿತು. ನಂತರ ಭಕ್ತರಿಂದ ಕಾರ್ತಿಕ ದೀಪೋತ್ಸವ ಜರುಗಿತು. ಪುಣ್ಯಸ್ಮರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಪುರಾಣ ಪ್ರವಚನ ಮಹಾಮಂಗಲಗೊಂಡಿತು.

ಎಚ್.ಎಂ.ವಿಶ್ವೇಶ್ವರಯ್ಯ ಸ್ವಾಮೀಜಿ ಪುರಾಣ ಪ್ರವಚನ, ಎ.ಎಂ.ಸೋಮಶೇಖರಯ್ಯಸ್ವಾಮಿ ಹಾರ್ಮೋನಿಯಂಗೆ ಸಿ.ಡಿ.ಮೌನೇಶ್ ತಬಲಾ ಸಾಥ್ ನೀಡಿದರು. ಮೆಟ್ರಿ ಗ್ರಾಮಸ್ಥರು ಸೇರಿ ಸುತ್ತಲಿನ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.