ಗುರ್ಲಾಪುರ: ಸಾರ್ವಜನಿಕರ ಹಿತದೃಷ್ಟಿಯಿಂದ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಅಪಘಾತ ವಲಯ ಗುರುತಿಸಿ ರಸ್ತೆ ಅಗಲೀಕರಣ ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಗೋಕಾಕ ಲಕ್ಷಿ$್ಮ ಶಿಣ ಸಂಸ್ಥೆ ನಿರ್ದೇಶಕ ಸವೋರ್ತ್ತಮ ಜಾರಕಿಹೊಳಿ ಹೇಳಿದರು.
ಬುಧವಾರ ಮಾಳತೋಟದ ಕನ್ನಡ ಗಂಡು ಮಕ್ಕಳ ಶಾಲೆ ಬಳಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ರಾಮಚಂದ್ರ ಅವತಾಡೆ ಮಾತನಾಡಿ, ಮುಧೋಳ&ನಿಪ್ಪಾಣಿ ರಾಜ್ಯ ಹೆದ್ದಾರಿ ಅಗಲೀಕರಣ, 1.15 ಕೋಟಿ ರೂ. ವೆಚ್ಚದಲ್ಲಿ ಹೈಮಾಸ್ಟ್ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಮೂಡಲಗಿ ಪುರಸಭೆ ಸದಸ್ಯರಾದ ಆನಂದ ಟಪಾಲ್ದಾರ, ಮಹಾದೇವ ಮುಗಳಖೋಡ, ವೀರಭದ್ರ ನೇರ್ಲಿ, ಮಹಾಲಿಂಗ ಮುಗುಳಖೋಡ, ಅಶೋಕ ಕೌಜಲಗಿ, ಲಕ್ಷ$್ಮಣ ಗೌರಾನಿ, ಜಗದೀಶ ಮುಗಳಖೋಡ, ಮಲ್ಲು ಗಾಣಿಗೇರ, ಚನ್ನಪ್ಪ ಮುಗಳಖೋಡ ಇತರರಿದ್ದರು.