ಪಾರಿಶ್ವಾಡ ಹನಿವೇಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಸುಭಾಷ ಗುಳಶೆಟ್ಟಿ, ಸುನಿತಾ ಸುಭಾಷ ಗುಳಶೆಟ್ಟಿ, ಶಿವಾನಂದ ಪಾಟೀಲ, ಡಾ.ಅನಿಲಕುಮಾರ ಬೆಣಗಿ ಇತರರು ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿ

ಇಟಗಿ: ಪ್ರಾಚೀನ ಸಂಸ್ಕೃತಿಯಂತೆ ಆಧುನಿಕ ಯುಗದಲ್ಲಿಯೂ ಗುರು ಇಲ್ಲದ ಜೀವನ ಊಹಿಸಲು ಅಸಾಧ್ಯ ಎಂದು ಪಾರಿಶ್ವಾಡ ಹನಿವೇಲ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ಸುಭಾಷ ಗುಳಶೆಟ್ಟಿ ಹೇಳಿದರು.

ಪಾರಿಶ್ವಾಡದ ಹನಿವೇಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುವಿಗೆ ಉನ್ನತ ಸ್ಥಾನವಿದ್ದು, ಮಕ್ಕಳ ಬದುಕು ಸುಂದರವಾಗಿ ನಿರ್ಮಿಸುವವರೇ ನಿಜವಾದ ಶಿಕ್ಷಕ ಎಂದರು.

ಆಡಳಿತ ಮಂಡಳಿಯ ಸುನಿತಾ ಸುಭಾಷ ಗುಳಶೆಟ್ಟಿ, ಶಿವಾನಂದ ಪಾಟೀಲ ಹಾಗೂ ಪ್ರಾಚಾರ್ಯ ಡಾ.ಅನಿಲಕುಮಾರ ಬೆಣಗಿ, ಕವಿತಾ ಸಂಪಗಾವಿ ಇದ್ದರು. ಮಕ್ಕಳಿಂದ ಗುರುವಂದನಾ ಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳಿಂದ ಶಿಕ್ಷಕ ವೃಂದಕ್ಕೆ ಪುಷ್ಪವೃಷ್ಠಿ ನಡೆಯಿತು. ವಿದ್ಯಾರ್ಥಿನಿಯರಾದ ದೀಪಾ ತಲ್ಲೂರ ಮತ್ತು ಅನನ್ಯ ಹಿರೇಮಠ ನಿರೂಪಿಸಿದರು. ತನುಶ್ರೀ ಗುದ್ಲಿ ಹಾಗೂ ರೀಟಾ ನಡುವಿನಮನಿ ಸ್ವಾಗತಿಸಿದರು. ಅಕ್ಷತಾ ನಾಯ್ಕ ವಂದಿಸಿದರು.