ಜಿಲ್ಲೆ

ಜಮೀನಿನಲ್ಲಿ ವಿದ್ಯುತ್​ ತಗುಲಿ ರೈತ ಸಾವು

ಹಾವೇರಿ: ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ಸಮಯದಲ್ಲಿ ರೈತರೊಬ್ಬರು ವಿದ್ಯುತ್​ ತಗುಲಿ ಮೃತಪಟ್ಟ ಘಟನೆ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಲೋಹಿತ್​ ತಿರಕಪ್ಪ ಓಬಣ್ಣನವರ (48) ಮೃತ ರೈತ.

ಇವರು ಮೆಕ್ಕೆಜೋಳ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ಸಮಯದಲ್ಲಿ ವಿದ್ಯುತ್​ ಕಂಬದ ಹತ್ತಿರ ನಿಂತಾಗ ವಿದ್ಯುತ್​ ನೆಲಕ್ಕೆ ಗ್ರೌಂಡ್​ ಆಗಿದ್ದು ಇದರಿಂದ ಶಾಕ್​ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.