ಜಿಲ್ಲೆ

ಜಿಲ್ಲೆಯಲ್ಲಿ ಮಂಗಳವಾರ 395 ಜನರಿಗೆ ಕರೊನಾ ಸೋಂಕು

ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ಕರೊನಾ ಅಟ್ಟಹಾಸ ಮುಂದುವರಿದಿದ್ದು, ವೃದ್ಧೆ ಹಾಗೂ ಮೂವರು ವೃದ್ಧರು ಸೇರಿದಂತೆ ಏಳು ಜನ ಸೋಂಕಿಗೆ ಬಲಿಯಾಗಿದ್ದಾರೆ.
ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೆಳಗಾವಿ ತಾಲೂಕಿನ 78, 75 ಹಾಗೂ 60 ವರ್ಷದ ಮೂವರು ವೃದ್ಧರು, 56 ವರ್ಷದ ಪುರುಷ ಹಾಗೂ 69 ವರ್ಷದ ಮಹಿಳೆ ಮತ್ತು ಚಿಕ್ಕೋಡಿ ತಾಲೂಕಿನ 65 ವರ್ಷದ ವೃದ್ಧೆ ಮತ್ತು ಗೋಕಾಕ ತಾಲೂಕಿನ 55 ಪುರುಷ ಸಾವಿಗೀಡಾಗಿದ್ದಾರೆ.

ಸೋಂಕಿನಿಂದ ಮೃತಪಟ್ಟವರ ಸಂಖ್ಯೆ-137ಕ್ಕೆ ಏರಿಕೆಯಾಗಿದೆ. ಮಂಗಳವಾರ ಪತ್ತೆಯಾದ 395 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,376ಕ್ಕೆ ಏರಿದೆ. ಬೆಳಗಾವಿ ತಾಲೂಕಿನಲ್ಲಿ- 148, ಗೋಕಾಕ-34, ಚಿಕ್ಕೋಡಿ-25, ಹುಕ್ಕೇರಿ-49, ಬೈಲಹೊಂಗಲ-22, ಸವದತ್ತಿ-26, ರಾಯಬಾಗ-34, ಅಥಣಿ-6, ಖಾನಾಪುರ-43 ಹಾಗೂ ರಾಮದುರ್ಗ ತಾಲೂಕಿನಲ್ಲಿ 8 ಜನರಿಗೆ ಸೋಂಕು ತಗುಲಿದೆ. 459 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದರಿಂದ ಗುಣಮುಖರಾದವರ ಸಂಖ್ಯೆ 4,658ಕ್ಕೆ ಏರಿಕೆಯಾಗಿದೆ. 465 ಜನರ ಪರೀಕ್ಷಾ ವರದಿ ಬಾಕಿ ಇದೆ.