ಗಂಗಾವತಿ ಸಮಾಜ ಇಲಾಖೆ ಕಚೇರಿಯಲ್ಲಿ ಸಹಾಯಕ ನಿರ್ದೇಶಕಿ ಡಾ.ಶ್ವೇತಾ ಅವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲೂಕು ಘಟಕದ ಸದಸ್ಯರು ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಆರ್. ಕೃಷ್ಣ, ಪದಾಧಿಕಾರಿಗಳಾದ ಕಲ್ಯಾಣಂ ನಾಗರಾಜ್, ಬಿ.ಎ ರಾಮಣ್ಣ, ಆರ್.ಕುಮಾರ, ಆರ್.ವೆಂಕಟೇಶ ಇತರರಿದ್ದರು. 
ಜಿಲ್ಲೆ

ಜಾತಿಗಣತಿಯಲ್ಲಿ ವೀರಶೈವ ಜಂಗಮ ಪರಿಗಣಿಸಿದರಿ

ರುದ್ರಪ್ಪ ವಾಲಿ

ಗಂಗಾವತಿ: ಜಾತಿ ಗಣತಿಯಲ್ಲಿ ವೀರಶೈವ ಜಂಗಮ ಸಮಾಜದ ಜಾತಿಯನ್ನು ಪರಿಗಣಿಸದಂತೆ ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲೂಕು ಘಟಕದ ಸದಸ್ಯರು ಸಮಾಜ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಶ್ವೇತಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸದಸ್ಯರೊಂದಿಗೆ ಕಚೇರಿಗೆ ತೆರಳಿದ ತಾಲೂಕು ಘಟಕದ ಪದಾಧಿಕಾರಿಗಳು ಪರಿಶಿಷ್ಟ ಜಾತಿಗಳ ಗಣತಿಯಲ್ಲಿ ವೀರಶೈವ ಜಂಗಮ ಸಮಾಜದವರು ಎಸ್‌ಸಿ ಎಂದು ಬರೆಯಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಆರ್. ಕೃಷ್ಣ ಮಾತನಾಡಿ, ಸುಪ್ರೀಂ ಕೋರ್ಟ್ ಮೀಸಲು ಒಳವರ್ಗೀಕರಣಕ್ಕೆ ಆದ್ಯತೆ ನೀಡಿದ್ದು, ಸೂಕ್ತ ಪ್ರಾತಿನಿಧ್ಯಕ್ಕೆ ಸೂಚಿಸಿದೆ. ಒಳಮೀಸಲು ಜಾರಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಹಮ್ಮಿಕೊಂಡಿದ್ದು, ಗಣತಿ ಕಾರ್ಯ ನಡೆಯುತ್ತಿದೆ.

ವೀರಶೈವ ಜಂಗಮರು ತಮ್ಮನ್ನು ‘ಬೇಡ ಜಂಗಮರು’ ಎಂದು ಕರೆದುಕೊಳ್ಳುತ್ತಾ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದ ವೀರಶೈವ ಲಿಂಗಾಯತ ಉಪಜಾತಿಗಳಲ್ಲಿ ‘ವೀರಶೈವ ಜಂಗಮ’ ಸಮುದಾಯವೂ ಒಂದಾಗಿದೆ. ವಾಮಮಾರ್ಗಗಳ ಮೂಲಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ನಡೆಸುತ್ತಿರುವ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರ ಜಾತಿಯನ್ನು ನಮೂದಿಸಬಾರದು ಹಾಗೂ ಗಣತಿಗೆ ಪರಿಗಣಿಸಬಾರದೆಂದು ಒತ್ತಾಯಿಸಿದರು.\

ಪದಾಧಿಕಾರಿಗಳಾದ ಕಲ್ಯಾಣಂ ನಾಗರಾಜ, ಬಿ.ಎ ರಾಮಣ್ಣ, ಆರ್.ಕುಮಾರ, ಆರ್.ವೆಂಕಟೇಶ, ನಾರಾಯಣ ಇತರರಿದ್ದರು. ಬುದ್ಧ ವೃತ್ತದಲ್ಲಿ ತಹಸೀಲ್ದಾರ್ ಯು.ನಾಗರಾಜಗೂ ಮನವಿ ಸಲ್ಲಿಸಲಾಯಿತು.