ಜಿಲ್ಲೆ

ಬೋಧನೆಯಲ್ಲಿ ಉಪಕರಣಗಳ ಬಳಕೆಯಾಗಲಿ

ಪ್ರಶಾಂತ ಹೂಗಾರ

ರಾಮದುರ್ಗ: ಮಕ್ಕಳ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕೋಪಕರಣಗಳೊಂದಿಗೆ ಬೋಧನೆ ಮಾಡಿದಾಗ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಹೇಳಿದರು.

ತಾಲೂಕಿನ ಹಿರೇಕೊಪ್ಪ ಕೆ.ಎಸ್ ಗ್ರಾಮದ ಲಿಟಲ್ ಹಾಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಲಿಕೋಪಕರಣಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೋಧಿಸುವ ವಿಷಯದ ಸಂಪೂರ್ಣ ಜ್ಞಾನವನ್ನು ಶಿಕ್ಷಕರು ಅರಿತುಕೊಂಡಿರಬೇಕು. ಬೋಧನೆಯಲ್ಲಿ ಉಪಕರಣಗಳ ಬಳಕೆಗೆ ಪ್ರಾಮುಖ್ಯತೆ
ನೀಡಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸಾವಿತ್ರಿ ಉಪ್ಪಾರ, ಶಿಕ್ಷಣ ಸಂಯೋಜಕ ಶ್ರೀಕಾಂತ ಕರಲಿಂಗಪ್ಪನವರ, ಸಿಆರ್‌ಪಿ ಪಿ.ಜಿ. ಜೇವೂರ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಉಪ್ಪಾರ, ಪುಂಡಲೀಕ ಸಕ್ರಪ್ಪಗೋಳ, ಎಂ.ಆರ್ ಇಂಗಳಗಿ, ಎಚ್.ಎ್.ದಬಾನಿ, ವಿ.ಎ್. ಉಪ್ಪಾರ ಇತರರಿದ್ದರು.