ಬೆಳಗಾವಿ: ಮೊದಲು ಶಿಕ್ಷಕ ಮತ್ತು ವಿಷಯ ಕೇಂದ್ರಿತ ಬೋಧನಾ ಪದ್ಧತಿ ಇತ್ತು. ಸದ್ಯ ವಿದ್ಯಾರ್ಥಿ ಕೇಂದ್ರಿತ ಬೋಧನಾ ಪದ್ಧತಿ ಇದೆ. ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಬೋಧಿಸಲು ಆಧುನಿಕ ತಂತ್ರಜ್ಞಾನ ಅಗತ್ಯವಿದೆ ಎಂದು ಜಿಐಟಿ ಕಾಲೇಜಿನ ಎಂಬಿಎ ಪ್ರಾಧ್ಯಾಪಕ ಡಾ.ಸಂದೀಪ ನಾಯರ್ ಹೇಳಿದರು.
ಲಕ್ಷ್ಯ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಆರ್‌ಸಿಯುದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಜರುಗಿದ ಬೋಧನಾ ಕೌಶಲ ಮತ್ತು ಎಪಿಐ ಸ್ಕೋರ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸೆಳೆಯಲು ಮತ್ತು ಹಿಡಿದಿಡಲು ಶಿಕ್ಷಕರು ಶ್ರಮಿಸಬೇಕಾದ ಅವಶ್ಯಕತೆಯಿದೆ ಎಂದರು. ಧಾರವಾಡದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಗುರುನಾಥ ಬಡಿಗೇರ, ಡಾ.ಎಂ.ಜಯಪ್ಪ, ಉಪ ಪ್ರಾಚಾರ್ಯ ಅನಿಲ ರಾಮದುರ್ಗ, ಡಾ.ರವಿ ದಳವಾಯಿ, ಡಾ.ಸುಮನ ಮುದ್ದಾಪುರ, ಡಾ. ಕವಿತಾ ಕುಸಗಲ್, ಜಗದೀಶ ಗಸ್ತಿ, ಸುಕನ್ಯಾ ಹಿರೇಮಠ, ಮಹಾದೇವ ಧರಿಗೌಡರ, ಸಚಿನ ಹಿರೇಮಠ, ಮಲ್ಲೇಶ ದೊಡ್ಡಲಕ್ಕನವರ, ಡಾ.ಯಲಪ್ಪ ಜಕ್ಕಣ್ಣವರ ಇತರರು ಇದ್ದರು.