ಕೂಡ್ಲಿಗಿ: ವಿದ್ಯಾರ್ಥಿಗಳಿಗೆ ಜ್ಞಾನದಾಹ ಇದ್ದರೆ ಎಂತಹ ಕಠಿಣ ವಿಷಯವಿದ್ದರೂ ಕಲಿಯಬಹುದು ಎಂದು ಜ್ಞಾನಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಎಂ.ರವಿಕುಮಾರ್ ಹೇಳಿದರು.
ಪಟ್ಟಣದ ಜ್ಞಾನಭಾರತಿ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಬಿ.ಇಡಿ ಮತ್ತು ವೈಎಸ್‌ಎಸ್‌ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ರಶ್ಮಿ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನರ್ಸಿಂಗ್ ಹಾಗೂ ಬಿ.ಇಡಿ ಶಿಕ್ಷಣ ಸಮಾಜದ ಆಧಾರ ಸ್ತಂಭಗಳಂತೆ. ಶಿಕ್ಷಕ ಹಳಿ ತಪ್ಪಿದರೆ ಇಡೀ ಸಮಾಜವೇ ಅಧಃಪತನದತ್ತ ಸಾಗಲಿದೆ. ಸಮಾಜದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಜ್ಞ್ಞಾನ ಮೀರಿದ ಮಹತ್ವದ ಜವಾಬ್ದಾರಿಗಳನ್ನು ಹೊಂದಿದ್ದಾರೆ. ರಾಷ್ಟ್ರದ ಭವಿಷ್ಯದ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರು ನಿರ್ಣಾಯಕರಾಗಿದ್ದಾರೆ. ಅದರಂತೆ ನರ್ಸಿಂಗ್ ವಿದ್ಯಾರ್ಥಿಗಳು ಸಹ ರೋಗಿಗಳ ಮನಸ್ಸನ್ನು ಗೆದ್ದು ಪ್ರೀತಿಯಿಂದ ಆರೈಕೆ ಮಾಡಿದರೆ ಬೇಗ ಗುಣಮುಖವಾಗುವುದರಲ್ಲಿ ಸಂಶಯವಿಲ್ಲ. ರೋಗಿಗಳಿಗೆ ಔಷಧಕ್ಕಿಂತ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದು ತಿಳಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಡಾ.ಶಿವರಾಜ್ ಗುಳಿಗೆ, ಪಿಎಸ್‌ಐ ಪ್ರಕಾಶ್ ಸಿ., ಡಾ.ಪಿ.ಕೆ.ಎಂ.ಸೌಮ್ಯಶ್ರೀ, ಡಾ.ಕೆ.ಎಂ.ಟಿ.ಸಿದ್ಧಾರ್ಥ, ಡಾ.ಶಿವಮೂರ್ತಿ ಹಿರೇಮಠ, ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಜಿ.ಆರ್.ರಾಜು, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಬಿ.ಇಡಿ ಪ್ರಾಚಾರ್ಯ ಎಚ್.ಎಂ.ವಿಜಯಕುಮಾರ, ಫಾರ್ಮಸಿ ವಿಭಾಗದ ಮುಖ್ಯಸ್ಥ ಡಾ.ಜಯಚಂದ್ರನ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಾಲುಮನಿ ರಾಘವೇಂದ್ರ ಇದ್ದರು.