ಸಿರಿಗೇರಿಯಲ್ಲಿ ಏರ್ಪಡಿಸಿದ್ದ ಕಣ್ಣಿನ ತಪಾಸಣೆ ಶಿಬಿರದಲ್ಲಿ ನೇತ್ರ ತಜ್ಞೆ ಶ್ರೀನಿ ಸಾಗರ ಅವರು ಪರೀಕ್ಷಿಸಿದರು. ವೈದ್ಯಾಧಿಕಾರಿ ಪೂಜಾರ್ ನಾಗರಾಜ್, ಚಿದಾನಂದ, ಸತೀಶ್ ಇದ್ದರು. 
ಜಿಲ್ಲೆ

ಸಿರಿಗೇರಿಯಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ

ಸಿರಿಗೇರಿ: ಗ್ರಾಮದಲ್ಲಿ ಬಳ್ಳಾರಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿ, ಪಿಎಚ್‌ಸಿ, ಶಂಕರ ಕಣ್ಣಿನ ಶಿವಮೊಗ್ಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸೊಸೈಟಿ ಸಹಯೋಗದೊಂದಿಗೆ ಭಾನುವಾರ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಯಿತು.

ಸಿರಿಗೇರಿ, ದಾಸಾಪುರ, ಕೊಂಚಿಗೇರಿ, ಗುಂಡಿಗನೂರು, ನಡಿವಿ, ಹಾವಿನಾಳು, ಮುದ್ದಟ್ಟನೂರು ಗ್ರಾಮಗಳಿಂದ 200ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಯಿತು. ನೇತ್ರ ತಜ್ಞೆ ಶ್ರೀನಿ ಸಾಗರ್ ಪರೀಕ್ಷಿಸಿದರು. ಕೆಲವರಿಗೆ ಸ್ಥಳದಲ್ಲಿ ಔಷಧ, ಕನ್ನಡಕ ವಿತರಿಸಲಾಯಿತು.

74 ಜನರಿಗೆ ಶಸ್ತ್ರಚಿಕಿತ್ಸೆ ನಡೆಸಲು ಶಿಫಾರಸು ಮಾಡಲಾಯಿತು. ವೈದ್ಯಾಧಿಕಾರಿಗಳಾದ ದಾನೇಶ್ವರಿ, ಎಚ್.ತಿಪ್ಪೇಸ್ವಾಮಿ, ಪೂಜಾರ್ ನಾಗರಾಜ್, ಪ್ರಮುಖರಾದ ಶಿವಪ್ರಸಾದ್, ತ್ಯಾಗರಾಜ್, ಚಿದಾನಂದ, ಸತೀಶ್ ಇತರರಿದ್ದರು.