ಸಿಂಧನೂರಿನಲ್ಲಿ ಶುಕ್ರವಾರ ಎಎಸ್ಪಿ ಕುಮಾರಸ್ವಾಮಿ ಮತ್ತು ಡಿವೈಎಸ್ಪಿ ಬಿ.ಎಸ್.ತಳವಾರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ನಗರ ಠಾಣೆ ಪಿಐ ರಾಜಕುಮಾರ ಭಜಂತ್ರಿ, ಗ್ರಾಮೀಣ ಸಿಪಿಐ ವೀರರೆಡ್ಡಿ, ಪಿಎಸ್‌ಐ ಮೌನೇಶ ರಾಠೋಡ ಇತರರಿದ್ದರು. 
ಜಿಲ್ಲೆ

ಸಿಂಧನೂರಿನಲ್ಲಿ ಪೊಲೀಸ್ ಪಥಸಂಚಲನ

ರುದ್ರಪ್ಪ ವಾಲಿ

ಸಿಂಧನೂರು: ಗಣೇಶ ಮತ್ತು ಈದ್ ಮಿಲಾದ್ ಹಬ್ಬದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಶುಕ್ರವಾರ ನಗರದಲ್ಲಿ ಎಎಸ್ಪಿ ಕುಮಾರಸ್ವಾಮಿ ಮತ್ತು ಡಿವೈಎಸ್ಪಿ ಬಿ.ಎಸ್.ತಳವಾರ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು.

ನಗರ ಠಾಣೆಯಿಂದ ಪೊಲೀಸ್ ಬ್ಯಾಂಡ್‌ನೊಂದಿಗೆ ಹೊರಟ ಪಥಸಂಚಲನ ಗಾಂಧಿವೃತ್ತ, ಮೆಹಬೂಬ್ ಕಾಲನಿಯ ನೂರಾನಿ ವೃತ್ತ, ಗಂಗಾವತಿ ರಸ್ತೆ, ಬಸ್ ನಿಲ್ದಾಣದ ಮೂಲಕ ತೆರಳಿ ಬಸವ ವೃತ್ತ, ನಟರಾಜ ಕಾಲನಿ ರಸ್ತೆ, ಟಿಪ್ಪುಸುಲ್ತಾನ್ ವೃತ್ತ, ಹಳೇ ಬಜಾರ ಮೂಲಕ ಸಾಗಿ ಕಿತ್ತೂರು ಚನ್ನಮ್ಮ ವೃತ ್ತ, ಕನಕದಾಸ ವೃತ ್ತ ಮತ್ತು ರಾಯಚೂರು ರಸೆ ್ತ ಮುಖಾಂತರ ನಗರ ಠಾಣೆ ತಲುಪಿತು. ಬಳಗಾನೂರು ಸಬ್ ಇನ್ಸ್‌ಪೆಕ್ಟರ್ ಎರಿಯಪ್ಪ ಅಂಗಡಿ, ಸಂಚಾರಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ ಹಿರೇಮಠ ಇತರರಿದ್ದರು.