ಜಿಲ್ಲೆ

2 ಕಾರು, ಬಸ್​, ಕ್ಯಾಂಟರ್, ಟಾಟಾ ಏಸ್ ಸರಣಿ ಅಪಘಾತ; ಇಬ್ಬರ ಸಾವು

malli

ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಎರಡು ಬಸ್​, ಒಂದು ಕಾರು ಹಾಗೂ ಒಂದು ಕ್ಯಾಂಟರ್ ಸರಣಿ ಅಪಘಾತಕ್ಕೆ ಒಳಗಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೇಹಳ್ಳಿ ಬಳಿ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಪಟ್ರೇಹಳ್ಳಿ ಸಮೀಪ ಬೆಳಗ್ಗೆ ನಾಲ್ಕು ಗಂಟೆಗೆ ಖಾಸಗಿ ಬಸ್​ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಖಾಸಗಿ ಬಸ್​, ಮಾರುತಿ ಆಮ್ನಿ, ಟಾಟಾ ಇಂಡಿಕಾ, ಟಾಟಾ ಏಸ್, ಕ್ಯಾಂಟರ್​ ಸೇರಿ ಐದು ವಾಹನಗಳು ಅಪಘಾತಕ್ಕೆ ಒಳಗಾಗಿದ್ದು, ಆಮ್ನಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾವೇರಿ ಮೂಲದ ಲತಾ (28), ಅತ್ತಿಬೆಲೆ ಮೂಲದ ಶಶಿಕುಮಾರ್ (26) ಮೃತರು. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.