In Sanghmitra aided school premises program 
ಜಿಲ್ಲೆ

ಪಿಡುಗುಗಳಿಂದ ಸಮಾಜಮುಕ್ತಗೊಳಿಸುವ ಆಶಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನಂದಗುಡಿ
ಗಾಂಧಿ ಅವರು ಅಸ್ಪೃಷ್ಯತೆ, ಜಾತಿಪದ್ಧತಿ, ಬಡತನ, ಅನಕ್ಷರತೆ, ಸಾಮಾಜಿಕ ಪಿಡುಗು, ಭ್ರಷ್ಟಾಚಾರ, ಗೋಹತ್ಯೆ, ಪಾಶ್ಚಾತ್ಯ ಸಂಸ್ಕೃತಿ, ಸಾಮಾಜಿಕ ಪಿಡುಗುಗಳಿಂದ ಮುಕ್ತಗೊಳಿಸಬೇಕು ಎಂಬುದು ದೃಢ ನಿಲುವು ಹೊಂದಿದ್ದರು ಎಂದು ಶಾಲಾ ಸಂಸ್ಥಾಪಕ ಅಧ್ಯಕ್ಷ ಸಿ.ಬೈರಪ್ಪ ತಿಳಿಸಿದರು.
ಹೋಬಳಿಯ ಸಂಘಮಿತ್ರ ಅನುದಾನಿತ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧಿ ಹಾಗೂ ಲಾಲ್‌ಬಹಾದೂರ್ ಶಾಸಿ ಜಯಂತಿಯಲ್ಲಿ ಮಾತನಾಡಿದರು.
ದೇಶದಲ್ಲಿನ ಎಲ್ಲ ಅನಿಷ್ಠಗಳನ್ನು ತೊಳೆದು ಹಾಕುವ ಆಶಯ ಗಾಂಧಿ ಹೊಂದಿದ್ದರು. ಹಾಗೆಯೇ, ಶಾಸ್ತ್ರಿಜಿ ಅವರಂತಹ ದಿಟ್ಟ ನಾಯಕತ್ವದಿಂದ ದೇಶ ಪ್ರಗತಿಯ ಪಥದಲ್ಲಿ ಮುನ್ನೆಡೆಯಿತು ಎಂದು ಹೇಳಿದರು.
ಶಿಕ್ಷಕರಾದ ವೆಂಕಟರಮಣ, ಮಾಧುರ್ಯ, ರೇಖಾ, ರವಿಕುಮಾರ್, ಆಂಜಿನಪ್ಪ, ಶಾಲಿನಿ, ಅಂಜುಂ ಕವಲ್ನಾಜ್, ದೈಹಿಕ ಶಿಕ್ಷಣ ಶಿಕ್ಷಕ ಸೈಯದ್ ಖಲೀಲ್ ಇದ್ದರು.