ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹೆಬ್ಬಾಳ ಗ್ರಾಮದ ಶ್ರೀ ಆದಿನಾಥ ಪತ್ತಿನ ಸೌಹಾರ್ದ ಸಹಕಾರಿಯು 2022-23ನೇ ಸಾಲಿನಲ್ಲಿ 35.11 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಭರಮಗೌಡ ಪಾಟೀಲ ಹೇಳಿದರು. ಹೆಬ್ಬಾಳ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಸರ್ವಸಾಧಾರಣ ಸಭೆ ಉದ್ದೇಶಿಸಿ ಮಾತನಾಡಿ, ಸಹಕಾರಿಯು ಎಲ್ಲ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿ ಶ್ರಮದಿಂದ ಸುಗಮ ಆಡಳಿತದ ಜತೆಗೆ ಲಾಭದತ್ತ ಮುನ್ನಡೆಯುತ್ತಿದೆ. ದುಡಿಯುವ ಬಂಡವಾಳ 37,32,55,255 ರೂ. ಇದ್ದು, ಶೇ.25 ಲಾಭಾಂಶ ವಿತರಿಸಲಾಗಿದೆ ಎಂದರು. ವಿವಿಧ ಸಂಘ-ಸಂಸ್ಥೆಗಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಬಾಳಗೌಡ ಪಾಟೀಲ, ರಾವಸಾಹೇಬ ಪಾಟೀಲ, ಸುಜಾತಾ ಪಾಟೀಲ, ಶಾಂತಿನಾಥ ಪಾಟೀಲ, ಸುಕುಮಾರ ಮಗದುಮ್ಮ, ಮಹಾಂತೇಶ ವಂಟಮೂರಿ, ಭರಮಗೌಡ ಪಾಟೀಲ, ದಾದಾಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು. ಹಿರಿಯರಾದ ಸಿದ್ದಪ್ಪ ಸದಲಗಿ, ವಿದ್ಯಾಧರ ಹರಾರಿ, ನೇಮಣ್ಣ ಮಗದುಮ್ಮ ,ಜಯಪಾಲ ಹೊನನ್ನವರ, ಮಾರುತಿ ಮರ‌್ಯಾಯಿ, ಶ್ರೀಮಂತ ಚಿಕ್ಕೋರ್ಡೆ, ವಿಪುಲ ಬಾಳಿಕಾಯಿ, ಆನಂದ ನಾಗನ್ನವರ, ಪ್ರಶಾಂತ ಪಾಟೀಲ, ವಿಜಯ ಬಾಳಿಕಾಯಿ, ವ್ಯವಸ್ಥಾಪಕ ಬಿ.ಟಿ.ಪಾಟೀಲ ಇತರರಿದ್ದರು.