ಕೂಡ್ಲಿಗಿ: ತಾಲೂಕಿನ ಬೆಳ್ಳಕಟ್ಟೆ ಗ್ರಾಮದ ಜಿ.ಎ.ಉಮೇಶ ಎಸ್ಸೆಸ್ಸೆಲ್ಸಿಯಲ್ಲಿ ಶೇ. 99.36 ಅಂಕ ಪಡೆದಿದ್ದಾರೆ. ಕೂಡ್ಲಿಗಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದು, ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾರಕಬಾವಿ ಗ್ರಾಮದ ಶ್ರೀ ಚೌಡೇಶ್ವರಿ ಪ್ರೌಢ ಶಾಲೆಯಲ್ಲಿ ಓದಿರುವ ಉಮೇಶ ತಾಯಿ ಡಿ.ಎನ್. ವಾಣಿ ಟೈಲರಿಂಗ್ ಮಾಡಿ ಜೀವನ ನಡೆಸುತ್ತಿದ್ದಾರೆ. ಪ್ರತಿ ನಿತ್ಯ ಬೆಳ್ಳಕಟ್ಟೆಯಿಂದ ಹಾರಕಬಾವಿಯವರಗೆ ನೆಡೆದುಕೊಂಡು ಶಾಲೆಗೆ ಬಂದು ಹೋಗಬೇಕು. ಉಮೇಶ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ ಎಂದು ಮುಖ್ಯ ಶಿಕ್ಷಕ ಸಿ. ಮಹಾಂತೇಶ ಹೇಳಿದ್ದು, ಸಾಧನೆಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹಾಗೂ ಶಾಲಾ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.