ಅಳವಂಡಿ ಪೋಲಿಸ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ ಆಚರಣೆಯ ಕುರಿತು ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಸಿಪಿಐ ಮಹಾಂತೇಶ ಸಜ್ಜನ ಮಾತನಾಡಿದರು. ಪಿಎಸ್‌ಐ ನಾಗಪ್ಪ, ಮಾರ್ತಾಂಡಪ್ಪ, ಸಿಬ್ಬಂದಿಗಳಾದ ಪಕೀರೇಶ, ಮಲ್ಲೇಶ, ಜಂದಿಪೀರ, ಗವೀಶ, ಅಮರೇಶ, ಗವಿಸಿದ್ದಪ್ಪ, ಯುವರಾಜ, ಬೀಬಿಜಾನ ಇದ್ದರು. 
ಜಿಲ್ಲೆ

ಶಾಂತಿಯಿಂದ ಹಬ್ಬಗಳನ್ನು ಆಚರಿಸಿ

ಅಳವಂಡಿ: ಹಬ್ಬ ಹರಿದಿನಗಳನ್ನು ಹಿರಿಯರ ಸಮ್ಮುಖದಲ್ಲಿ ಶಾಂತಿ, ಸೌಹಾರ್ದತೆಯಿಂದ ಆಚರಿಸಿ. ಯಾವುದೇ ರೀತಿ ಗಲಾಟೆಗೆ ಅವಕಾಶ ನೀಡಬೇಡಿ ಎಂದು ಕೊಪ್ಪಳ ಸಿಪಿಐ ಮಹಾಂತೇಶ ಸಜ್ಜನ ತಿಳಿಸಿದರು.

ಗ್ರಾಮದ ಪೋಲಿಸ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ ಹಬ್ಬದ ಆಚರಣೆಯ ಕುರಿತು ನಡೆದ ಸಾರ್ವಜನಿಕರ ಶಾಂತಿ ಸಭೆಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಹಬ್ಬಗಳ ನಡುವೆ ಪೋಲಿಸರು ಇರಬೇಕೆ ಹೊರತು ಪೋಲಿಸರ ನಡುವೆ ಹಬ್ಬಗಳಾಗಬಾರದು. ಕಾರಣ ಸರಕಾರದ ನಿಯಮಾವಳಿ ಪ್ರಕಾರ ಹಬ್ಬಗಳನ್ನು ಆಚರಿಸಿ.

ಗಣೇಶ ವಿಸರ್ಜನೆ ಸಾಯಂಕಾಲ 4 ರಿಂದ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು ಮತ್ತು ಡಿಜೆ ಬಳಕೆ ನಿಷೇಧಿಸಲಾಗಿದ್ದು ಅದನ್ನು ಹಚ್ಚಬಾರದು. ಸರಕಾರದ ಮಾರ್ಗಸೂಚಿಯಂತೆ ಹೆಚ್ಚು ಶಬ್ದ ಸೂಸುವ ದ್ವನಿವರ್ದಕ ಬಳಸಬಾರದು ಹಾಗೂ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದೆ.

ಅನುಮತಿಗಾಗಿ ಕೊಪ್ಪಳ ಪೋಲಿಸ್ ಠಾಣೆಯಲ್ಲಿ ಎಕ ಗವಾಕ್ಷಿ ವ್ಯವಸ್ಥೆ ಪ್ರಾರಂಭಿಸಿದ್ದು ಇಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆದುಕೊಳ್ಳಿ, ಅನಾವಶ್ಯಕ ವಿಷಯಗಳನ್ನು ಇಟ್ಟುಕೊಂಡು ಗಲಾಟೆ ಮಾಡಬಾರದು. ಇಂತಹ ಚಟುವಟಿಕೆ ನಡೆದರೆ ಕಾನೂನು ಕ್ರಮ ಕೈಕೊಳ್ಳಲಾಗುವದು ಕಾರಣ ಹಬ್ಬಗಳನ್ನು ಶಾಂತಿಯಿಂದ ಆಚರಿಸಿ ಎಂದರು.

ಪಿಎಸ್‌ಐ ನಾಗಪ್ಪ, ಮಾರ್ತಾಂಡಪ್ಪ, ಸಿಬ್ಬಂದಿಗಳಾದ ಪಕೀರೇಶ, ಮಲ್ಲೇಶ, ಜಂದಿಪೀರ, ಗವೀಶ, ಅಮರೇಶ, ಗವಿಸಿದ್ದಪ್ಪ, ಯುವರಾಜ, ಬೀಬಿಜಾನ ಪ್ರಮುಖರಾದ ಜಂಗ್ಲಿಸಾಬ, ವಿಜಯಕುಮಾರ, ಸತೀಶ ಜಾಣಗಾರ, ಶರಣಪ್ಪ ಬಳ್ಳಾರಿ,
ಮಹಾಂತೇಶ, ಆಕಾಶ, ಮಂಜುನಾಥ, ಗವಿ, ಪ್ರದೀಪ, ಶಿವು, ಮುಸ್ತುಸಾಬ, ದ್ಯಾಮಣ್ಣ, ರಮೇಶ, ಹನುಮಪ್ಪ, ಮರಿಯಪ್ಪ, ಪುನೀತ, ನವೀನ, ಜೂನಸಾಬ, ರೇಣುಕಯ್ಯ, ಮುತ್ತು ಇದ್ದರು.