ಜಿಲ್ಲೆ

ಚಿಂಚೋಳಿ ತಾಲೂಕಿನ ಪಂಚಾಯಿತಿಗಳಲ್ಲಿ ಕರವಸೂಲಿಗೆ ಆದ್ಯತೆ ನೀಡಿ

ಚಿಂಚೋಳಿ: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕರವಸೂಲಿಗೆ ಆದ್ಯತೆ ನೀಡಬೇಕು ಎಂದು ತಾ.ಪಂ ಇಓ ಶಂಕರ್ ರಾಠೋಡ ಖಡಕ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರದಂದು ಗ್ರಾ.ಪಂ ಕರವಸೂಲಿಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳ ಸರ್ವೆ, ತೆರಿಗೆ ವಸೂಲಿ ಮಾಡಲು ನಿಷ್ಕಾಳಜಿ ತೊರಿದರೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

ಸಭೆಯಲ್ಲಿ ಹಾಜರಾಗದ ಕರವಸೂಲಿಗಾರರ ವಿರುದ್ಧ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸಲಾಗುವುದು. ಸರಕಾರದ ಮಾರ್ಗಸೂಚಿಗಳನ್ನು ಪಾಲಿ‌ಸುವ ಮೂಲಕ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಒಗ್ಗೂಡಿ ಶ್ರಮಿಸೋಣ ಎಂದು ಮಾತನಾಡಿದರು.

ಈ ವೇಳೆ ನರೇಗಾ ಯೋಜನೆ ಅಧಿಕಾರಿ ನಾಗೇಂದ್ರಪ್ಪ ಸುಲೇಪೇಟ, ಮಡಿವಾಳಯ್ಯ ಸ್ವಾಮಿ, ರೇವಣಸಿದ್ದ ಪ್ಪ ಪಾಟೀಲ್, ವಿಶ್ವನಾಥ ರಾಯಪಳ್ಳಿ, ಕಮಲಾದಾಸ್, ಜಗದೇವ, ಸಂಗಮೇಶ, ಶರಣಬಸಪ್ಪ, ವೀರೇಂದ್ರ, ಸಂಜು ಕುಮಾರ್, ಮುರುಗೇಪ್ಪಾ, ನಾರಾಯಣ, ಶ್ವೇತಾ ಗುತ್ತೇದಾರ, ತುಕ್ಕಪ್ಪಾ, ಅಮೃತರಾವ, ಅಬ್ದುಲ್ ರಶೀದ್, ಬಸಪ್ಪ, ಮಧುರರಾಣಿ, ಶಿವಕುಮಾರ, ಮಲ್ಲಪ್ಪ ಸೇರಿದಂತೆ ಅನೇಕರು ಇದ್ದರು.