ಜಿಲ್ಲೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳಿಂದ 37 ನಾಮಪತ್ರ ಸಲ್ಲಿಕೆ

ಮೈಸೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳಿಂದ 37 ನಾಮಪತ್ರ ಸಲ್ಲಿಕೆಯಾಗಿದೆ.

ಕೊನೆಯ ದಿನವಾದ ಗುರುವಾರ ಒಂದೇ ದಿನ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಅಂತಿಮ ದಿನ ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)ಯ ಅಭ್ಯರ್ಥಿಯಾಗಿ ಎಚ್.ಎಂ.ನಂಜುಂಡಸ್ವಾಮಿ, ಕರ್ನಾಟಕ ಜನತಾ ಪಕ್ಷದಿಂದ ಎನ್.ಅಂಬರೀಶ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್‌ನಿಂದ ಎ.ಜಿ.ರಾಮಚಂದ್ರರಾವ್, ಬಹುಜನ ಸಮಾಜವಾದಿ ಪಕ್ಷದಿಂದ ರೇವತಿ ರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ಪಿ.ಕೆ.ದರ್ಶನ್ ಶೌರಿ, ರಾಜು, ಸಣ್ಣ ನಾಯಕ, ಸಿ.ಜೆ.ಅಂಬೇಡ್ಕರ್, ರಾಜಣ್ಣ, ಆರ್.ಮಹೇಶ್, ಡಿ.ಎನ್.ನವೀನ್ ಕುಮಾರ್, ಶಿವಕುಮಾರ್ ಜೆ.ಶಿವಣ್ಣ ತಲಾ ಒಂದು ಸೆಟ್ ನಾಮಪತ್ರ ಸಲ್ಲಿಸಿದರೆ, ಪಕ್ಷೇತರ ಅಭ್ಯರ್ಥಿಯಾಗಿ ರಾಮಯ್ಯ ಎರಡು ಸೆಟ್ ನಾಮಪತ್ರ ಸಲ್ಲಿಸಿದರು.


ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ್ ತಲಾ 4 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.