ಮಸ್ಕಿ: ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಮಹಿಳೆಯರು ಸಂಕ್ರಾಂತಿ ಉತ್ಸವ ಅಂಗವಾಗಿ ಶುಕ್ರವಾರ ಸಂಜೆ ಪಥ ಸಂಚಲನ ನಡೆಸಿದರು.
ಗಚ್ಚಿನ ಹಿರೇಮಠದಿಂದ ಆರಂಭವಾದ ಪಥ ಸಂಚಲನ ಹಳೇ ಬಸ್ ನಿಲ್ದಾಣದ ಮುಖಾಂತರ ನರಸನಗೌಡ ಶಾಲೆ ತಲುಪಿತು. ಸಮಿತಿಯ 85ಕ್ಕೂ ಹೆಚ್ಚು ಮಹಿಳೆಯರು ಗಣವೇಷಧಾರಿಗಳಾಗಿ ಭಾಗವಹಿಸಿದ್ದರು. ನರಸನಗೌಡ ಶಾಲೆಯಲ್ಲಿ ರಾಷ್ಟ್ರ ಮಾತಾ ಅಹಿಲ್ಯಬಾಯಿ ಹೋಳ್ಕರ್ ಜನ್ಮದಿನ ಆಚರಿಸಲಾಯಿತು.
ಉಪನ್ಯಾಸಕಿ ತನುಜಾ ಹಾಗೂ ಪಾರ್ವತಿ ಕವಿತಾಳ, ಅಮೃತ ಜೋಗಿನ್, ಚಂದ್ರಕಲಾ ದೇಶಮುಖ ಮಾತನಾಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪ್ರಮುಖರಾದ ಪ್ರಕಾಶ ಧಾರಿವಾಲ್, ಶಿವಶಂಕರಪ್ಪ ಹಳ್ಳಿ, ಅಪ್ಪಾಜಿಗೌಡ ಪಾಟೀಲ, ಡಾ.ನಾಗನಗೌಡ, ಮಲ್ಲಿಕಾರ್ಜುನ ನಾಯಿನೆಗಲಿ, ಶಿವಕುಮಾರ ಎನ್, ಲಕ್ಷ್ಮೀನಾರಾಯಣ ಶೆಟ್ಟಿ, ಮೌನೇಶ ನಾಯಕ, ಶರಣಯ್ಯ ಸೊಪ್ಪಿಮಠ, ಎಂ.ಶಿವಶರಣ, ಜಿ.ವೆಂಕಟೇಶ ನಾಯಕ ಇದ್ದರು.