ಮುರಗೋಡ: ಸ್ಥಳಿಯ ಹೊರಟ್ಟಿ ಓಣಿಯ ಕರಗುಡಿ ಬಸವೇಶ್ವರ ಮಹಾ ರಥೋತ್ಸವ ಸೋಮವಾರ ವೈಭವದೊಂದಿಗೆ ಜರುಗಿತು. ದೇವರಿಗೆ ಮಹಾರುದ್ರಾಭಿಷೇಕ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಅನ್ನ ಸಂತರ್ಪಣೆ ನಡೆಯಿತು. ಭಕ್ತರು ನೆವೇದ್ಯ ಹಿಡಿದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಂಜೆ ಅಲಂಕತಗೊಂಡ ರಥೋತ್ಸವ ದೇವಸ್ಥಾನದಿಂದ ಕೆಂಗೇರಿ ಚಿದಂಬರೇಶ್ವರ ದ್ವಾರದವರೆಗೆ ಆಗಮಿಸಿ ಮರಳಿತು. ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು, ಖಾರಿಕ್ ಅರ್ಪಿಸಿದರು. ಗೀತಾತಾಯಿ ದೇಸಾಯಿ, ವಿ.ಬಿ.ದೇಸಾಯಿ, ಸಚಿನ ಕುರಬೇಟ, ಮಲ್ಲಿಕಾರ್ಜುನ ಕಾರಗಿ, ಈಶ್ವರಪ್ಪ ಕುರಬೇಟ, ಮಲ್ಲಪ್ಪ ಪಡೆಣ್ಣವರ, ಸೋಮಶೇಖರ ಕುರಬೇಟ, ಮಹಾರುದ್ರಪ್ಪ ಕಾಜಗಾರ, ಶಿವು ಕಾರಗಿ, ಜಗದೀಶ ಯರಗಟ್ಟಿಮಠ ಇತರರಿದ್ದರು.