ಜಿಲ್ಲೆ

ಡಾ.ಪುನೀತ್ ರಾಜ್‌ಕುಮಾರ್ ಸ್ಮರಣೆ

ಪ್ರಸಿನ್ ಕೆ.ಆರ್

ಚನ್ನರಾಯಪಟ್ಟಣ: ಚಲನಚಿತ್ರ ನಟ ದಿ.ಡಾ.ಪುನೀತ್ ರಾಜ್‌ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪಟ್ಟಣದ ಆಸ್ಪತ್ರೆ ರಸ್ತೆಯಲ್ಲಿ ಆಯೋಜಿಸಲಾಗಿತ್ತು.

ಪುರಸಭಾ ಸದಸ್ಯ ಸಿ.ಎನ್.ಶಶಿಧರ್ ಹಾಗೂ ಸ್ನೇಹ ಬಳಗ, ಲಯನ್ಸ್ ಸೇವಾ ಸಂಸ್ಥೆವತಿಯಿಂದ ಸಮಾಜದಲ್ಲಿ ಎಲೆ ಮರೆಕಾಯಿಯಂತೆ ದುಡಿಯುವವರನ್ನು ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ನಟ ಸುನಾದ್‌ರಾಜ್ ಮಾತನಾಡಿ, ಪುನೀತ್ ಅವರ ಒಳ್ಳೆಯ ಗುಣಗಳ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಲಿ ಎಂದರು.

ಡಾ.ವಿ.ಮಹೇಶ್ ಮಾತನಾಡಿ, ಮನುಷ್ಯ ಶಾಶ್ವತವಲ್ಲ ಆತ ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಪುನೀತ್ ಅವರ ಸಮಾಜಮುಖಿ ಕಾರ್ಯಗಳು ಯುವ ಜನತೆಗೆ ಪ್ರೇರಣೆಯಾಗಿವೆ ಎಂದರು.

ವೇದಿಕೆಯಲ್ಲಿ ಪ್ರಮುಖರಾದ ಸಿ.ವಿ.ರಾಜಪ್ಪ, ಸಿ.ಎನ್.ಶಶಿಧರ್ ಸಿ.ಎನ್.ನಾಗರಾಜ್ ಇತರರು ಇದ್ದರು.