ಜಿಲ್ಲೆ

ಮೆಗಾ ಲೋಕ ಅದಾಲತ್​ನಲ್ಲಿ ಹಲವು ಪ್ರಕರಣ ಇತ್ಯರ್ಥ 20 ಲಕ್ಷಕ್ಕೂ ಅಧಿಕ ಹಣ ವಸೂಲಿ

ಸಿದ್ದಾಪುರ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್​ನಲ್ಲಿ ಸಿದ್ದಾಪುರದ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ 9 ಸಿವಿಲ್, 39 ಕ್ರಿಮಿನಲ್, 488 ಪೆಟ್ಟಿ ಹಾಗೂ ಬ್ಯಾಂಕ್​ನ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಿಂದ 20 ಲಕ್ಷಕ್ಕೂ ಅಧಿಕ ಹಣ ವಸೂಲಾಗಿದೆ.

ಲೋಕ ಅದಾಲತ್​ನಲ್ಲಿ ಸಿದ್ದಾಪುರ ನ್ಯಾಯಾಲಯದಲ್ಲಿ 5 ವರ್ಷಗಳಿಂದ ಬಾಕಿ ಇದ್ದ 1 ಮೂಲದಾವಾ ಪ್ರಕರಣ ಹಾಗೂ 1 ಕ್ರಿಮಿನಲ್ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿದ್ದಲ್ಲದೆ, ಹಿರಿಯ ನಾಗರಿಕರ 5 ಪ್ರಕರಣಗಳು ಇತ್ಯರ್ಥಗೊಂಡಿದ್ದು ವಿಶೇಷವಾಗಿದೆ.

ನ್ಯಾಯಾಧೀಶರಾದ ತಿಮ್ಮಯ್ಯ ಜಿ. ಅವರು ನ್ಯಾಯಾಂಗ ಸಂಧಾನಕಾರರಾಗಿ ಹಾಗೂ ನ್ಯಾಯವಾದಿ ಕೆ.ಜಿ. ನಾಯ್ಕ ನ್ಯಾಯಾಂಗೇತರ ಸಂಧಾನಕಾರರಾಗಿದ್ದರು.

ಅದಾಲತ್​ನಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಶೇಖರ ಎಚ್.ಎಸ್, ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.