ಸಂಡೂರು ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಎಚ್.ಷಡಕ್ಷರಯ್ಯ, ಎಸ್ಟಿ ಕಲ್ಯಾಣಾಧಿಕಾರಿ ರವಿಕುಮಾರ ಕಡ್ಲೆಬಾಳು, ತಾಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ನವಲೂಟಿ ಜಯಣ್ಣ ಇತರರಿದ್ದರು. 
ಜಿಲ್ಲೆ

ಹಲವು ಭಾಷೆಗಳಿಗೆ ರಾಮಾಯಣ ಅನುವಾದ

ನರೇಶ್ ಕುಮಾರ್

ಸಂಡೂರು: ತಾಲೂಕು ಕಚೇರಿಯಲ್ಲಿ ಗುರುವಾರ ತಾಲೂಕು ವಾಲ್ಮೀಕಿ ಮಹಾಸಭಾ, ಪರಿಶಿಷ್ಟ ವರ್ಗಗಳ ಇಲಾಖೆಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ತಹಸೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಆದರ್ಶಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ವಾಲ್ಮೀಕಿ ಬರೆದ ರಾಮಾಯಣ ಹಲವಾರು ಬಾಷೆಗಳಿಗೆ ಅನುವಾದವಾಗಿದ್ದು, ಮಕ್ಕಳಿಗೆ ತಿಳಿಸಬೇಕು ಎಂದರು.

ತಾಪಂ ಇಒ ಎಚ್.ಷಡಕ್ಷರಯ್ಯ, ಎಸ್ಟಿ ಕಲ್ಯಾಣಾಧಿಕಾರಿ ರವಿಕುಮಾರ ಕಡ್ಲೆಬಾಳು, ಎಸ್ಸಿ ಕಚೇರಿಯ ಎನ್.ಕೆ.ವೆಂಕಟೇಶ್, ತಾಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ನವಲೂಟಿ ಜಯಣ್ಣ, ಮಾಜಿ ಅಧ್ಯಕ್ಷ ಡಿ.ಕೃಷ್ಣಪ್ಪ, ಸಿಎಂ.ಶಿಗ್ಗಾಂವಿ, ವಸಂತಕುಮಾರ್, ಜೆಬಿಟಿ ಬಸವರಾಜ, ಕಾಳಿಂಗೇರಿ ಮಲ್ಲಿಕಾರ್ಜುನ, ಸತ್ಯನಾರಾಯಣ, ಶಾಮಿಯಾನ ಅಂಜಿನಪ್ಪ, ಚಂದ್ರು, ಪರಶುರಾಮ್, ರೈತ ಸಂಘದ ಜಿಲಾಧ್ಯಕ್ಷ ಎಂಎಲ್‌ಕೆ.ನಾಯ್ಡು ಇತರರಿದ್ದರು.