ಕೊಳ್ಳೇಗಾಲ: ತಾಲೂಕಿನಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಮುನ್ನಾ ದಿನವಾದ ಭಾನುವಾರ ಎಳ್ಳು, ಕಬ್ಬು, ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು, ಮಾವಿನಸೊಪ್ಪು, ಉತ್ತರಾಣಿ ಸೊಪ್ಪು ಖರೀದಿ ಭರಾಟೆ ಜೋರಾಗಿತ್ತು.
ಪಟ್ಟಣದ ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಮಸೀದಿ ವೃತ್ತ, ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಗಳು ಜನಜಂಗುಳಿಯಿಂದ ತುಂಬಿದ್ದವು. ಎಳ್ಳು-ಬೆಲ್ಲ, ಕಬ್ಬು ಖರೀದಿಗೆ ಜನರು ಮುಗಬಿದ್ದರು. ಹೂವಿನ ಬೆಲೆ ಏರಿಕೆ ಕಂಡಿದ್ದರೂ ಲೆಕ್ಕಿಸಲಿಲ್ಲ. ಕಾಕಡ ಮಾರಿಗೆ 80, ಸೇವಂತಿಗೆ 70, ಕನಕಾಂಬರ 100, ಚೆಂಡುಮಲ್ಲಿಗೆ ಕೆಜಿಗೆ 60ರಿಂದ 70 ಹಾಗೂ ಸೇವಂತಿಗೆ 180ರಿಂದ 200 ರೂ.ಇತ್ತು. ಜಲ್ಲೆ ಕಬ್ಬಿಗೆ 50ರಿಂದ 60 ರೂ.ವರೆಗೂ ಮಾರಾಟ ಮಾಡುವುದು ಕಂಡುಬಂದಿತು.
ಜಾನುವಾರುಗಳನ್ನು ಅಲಂಕರಿಸುವ ಸಂಪ್ರದಾಯವಿರುವ ಕಾರಣ ರೈತರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.