ಹನುಮಸಾಗರದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ತರಬೇತಿದಾರರಾದ ಈರಣ್ಣ ಬದಾಮಿ, ಭೀಮಾಂಬಿಕ ಚನ್ನಾದಾಸರ, ಬಸವರಾಜ ಶಿರೋಳ, ದೈಹಿಕ ಶಿಕ್ಷಕ ತಿಪಣ್ಣ ಪಾಲಕಾರ ಇತರರಿದ್ದರು. 
ಜಿಲ್ಲೆ

ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹನುಮಸಾಗರ: ಪಟ್ಟಣದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಶ್ವಿನಿ ಪೂಜಾರ, ವೈಷ್ಣವಿ ಸೂಡಿ, ರತ್ನಾ ಬದಾಮಿ, ಪ್ರೌಢ ಶಾಲಾ ವಿಭಾಗದಲ್ಲಿ ಭರತ ಕಮ್ಮಾರ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕರಾಟೆ ತರಬೇತಿದಾರರಾದ ಈರಣ್ಣ ಬದಾಮಿ, ಭೀಮಾಂಬಿಕ ಚನ್ನಾದಾಸರ, ಬಸವರಾಜ ಶಿರೋಳ, ದೈಹಿಕ ಶಿಕ್ಷಕ ತಿಪಣ್ಣ ಪಾಲಕಾರ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ರಾಷ್ಟ್ರೀಯ ಪೆಂಕಾಕ್ ಶೀಲಾತ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ ಟೈಲರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.