ಜಿಂದಾಲ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ನೌಕರರ ಪಾಲಕರು ಕಾರ್ಖಾನೆ ಬಳಿ ಮಂಗಳವಾರ ಧರಣಿ ನಡೆಸಿದರು. ಜಿ.ಮಣಿ, ಆನಂದಿಮನೆ, ಮಹೇಶ್ವರ, ಫಣಿಕುಮಾರಿ ಇದ್ದಾರೆ. 
ಜಿಲ್ಲೆ

ಜೆಎಸ್‌ಡಬ್ಲುೃನಲ್ಲಿ ನಡೆದ ಅವಘಡದ ಸತ್ಯ ಹೊರಬರಲಿ

ನರೇಶ್ ಕುಮಾರ್

ಸಂಡೂರು: ಜೆಎಸ್‌ಡಬ್ಲುೃನಲ್ಲಿ ಸಂಭವಿಸಿದ್ದ ಅವಘಡದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮೃತ ನೌಕರರ ಕುಟುಂಬದವರು ಜಿಂದಾಲ್ ಗೇಟ್ ಬಳಿ ಮಂಗಳವಾರ ಧರಣಿ ನಡೆಸಿದರು.

ಮೃತಪಟ್ಟ ಶಿವ ಮಗದೇವ್ ಅವರ ತಂದೆ ಜಿ.ಮಣಿ, ತಾಯಿ ಆನಂದಿಮನೆ ಹಾಗೂ ಸುಶಾಂತ್ ಕೃಷ್ಣ ಅವರ ತಂದೆ ಮಹೇಶ್ವರ, ತಾಯಿ ಫಣಿಕುಮಾರಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಅವಘಡದ ಸತ್ಯ ಹೋರ ಬರಬೇಕು. ಶಿವ ಮಗದೇವ್, ಸುಶಾಂತ್ ಕೃಷ್ಣ ಮತ್ತು ಘಂಟೆ ಜಡೆಪ್ಪ ಮೃತಪಟ್ಟು 45ದಿನ ಕಳೆದರೂ ಅವಘಡದ ಬಗ್ಗೆ ಆಡಳಿತ ಮಂಡಳಿ ಮೌನ ತಾಳಿದೆ.

ಬದಲಿಗೆ ಮೃತರ ವಿರುದ್ಧವೇ ಆರೋಪಗಳನ್ನು ಹೊರಿಸಿರುವುದು ಮತ್ತಷ್ಟು ದುಃಖದ ಸಂಗತಿ. ಕುಟುಂಬಕ್ಕೆ ಆಸರೆ ಇದ್ದವರನ್ನು ಕಳೆದುಕೊಂಡಿರುವ ನಮಗೆ ಅವಮಾನ ಆಗುವ ರೀತಿಯಲ್ಲಿ ಆಡಳಿತ ಮಂಡಳಿ ವರ್ತಿಸುತ್ತಿದೆ. ಅವಘಡಕ್ಕೆ ಕಾರಣರಾದವರನ್ನು ಶಿಕ್ಷಿಸಿ ನ್ಯಾಯ ಕೊಡಿಸಬೇಕು. ಈಗಾಗಲೇ ಮೃತರ ಕುಟುಂಬಗಳಿಗೆ ಪರಿಹಾರ ನೀಡಿರುವುದಾಗಿ ಹೇಳಿದ ಸುಳ್ಳು ಪ್ರಚಾರ ತಡೆಯಬೇಕು ಎಂದು ಧರಣಿ ನಿರತರು ಹೇಳಿದರು.

ಸ್ಥಳಕ್ಕೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ಸಿಪಿಐ(ಎಂ)ತಾಲೂಕ ಕಾರ್ಯದರ್ಶಿ ಎ.ಸ್ವಾಮಿ, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲುಬಾ ತಾಳೂರು ಭೇಟಿ ನೀಡಿ, ಬೆಂಬಲ ನೀಡಿದರು.