ಹುಬ್ಬಳ್ಳಿ: ಬೆಂಗಳೂರಿನ ಗ್ಲೇನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಖ್ಯಾತ ಮೂಳೆ ಚಿಕಿತ್ಸೆ ಹಾಗೂ ಕೀಲು ಮರು ಜೋಡಣಾ ಶಸ್ತ್ರಚಿಕಿತ್ಸಾ ತಜ್ಞ ಡಾ. ಬಸವರಾಜ ಸಿ.ಎಂ. ಧಾರವಾಡದ ಮರಾಠಾ ಕಾಲನಿಯ ವಿಆರ್ಎಲ್ ಆಫೀಸ್ ಹತ್ತಿರವಿರುವ ರಾಮನಗೌಡರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ. 17ರಂದು ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಸಮಾಲೋಚನೆಗೆ ಲಭ್ಯರಿರುತ್ತಾರೆ.
ಅವರು ಹುಬ್ಬಳ್ಳಿಯ ದಾಜೀಬಾನಪೇಟೆಯಲ್ಲಿರುವ ಸಿಟಿ ಕ್ಲಿನಿಕ್ನಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ಹಾಗೂ ತತ್ವದರ್ಶ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀಯಾ ಪರ್ಲ್ ಬಿಲ್ಡಿಂಗ್ ಪಕ್ಕದಲ್ಲಿರುವ ಡಾ. ಚಟ್ನಿ ಪಾಲಿ ಕ್ಲಿನಿಕ್ನಲ್ಲಿ ಸಂಜೆ 4.30 ರಿಂದ 6 ಗಂಟೆಯವರೆಗೆ ಸಮಾಲೋಚನೆಗೆ ಲಭ್ಯರಿರುವರು.
ಕೀಲು ನೋವು, ಮೊಳಕಾಲು ನೋವು, ಕೀಲು ಮರು ಜೋಡಣೆ, ಹಿಪ್ ಮರುಜೋಡಣೆ, ರಿವಿಷನ್ ಶಸ್ತ್ರ ಚಿಕಿತ್ಸೆ ಮುಂತಾದ ವಿಷಯಗಳ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ಮಾಡಲು ಬಯಸುವವರು ಆಸ್ಪತ್ರೆಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.