ಜಿಲ್ಲೆ

ಹಿರೂರಲ್ಲಿ ರೈತ ನೇಣಿಗೆ ಶರಣು

ಹಾನಗಲ್ಲ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಿರೂರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದ ಬಸವರಾಜ ವೀರಪ್ಪ ದಾನಗೊಂಡರ (60) ಮೃತ ದುರ್ದೈವಿ.

1.12 ಎಕರೆ ಕೃಷಿ ಭೂಮಿ ಹೊಂದಿರುವ ಬಸವರಾಜ ತಮ್ಮ ಹೊಲದಲ್ಲಿನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

2023ರಲ್ಲಿ ಗೆಜ್ಜಿಹಳ್ಳಿ ಶಾಖೆಯ ಕೆನರಾ ಬ್ಯಾಂಕ್​ನಲ್ಲಿ 1.30 ಲಕ್ಷ ರೂ. ಸಾಲ ಪಡೆದಿದ್ದರು. ಇದರೊಂದಿಗೆ ವಿವಿಧ ಸ್ವ-ಸಹಾಯ ಸಂಘಗಳಲ್ಲಿ ಕೈಗಡ ಸಾಲ, ಬಂಗಾರದ ಆಭರಣ ಸಾಲ ಪಡೆದಿದ್ದರು ಎನ್ನಲಾಗಿದೆ.

ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.